ಓಲಾ, ಉಬರ್‌ ಕಂಪನಿಗಳಿಗೆ ನೋಟಿಸ್‌

7

ಓಲಾ, ಉಬರ್‌ ಕಂಪನಿಗಳಿಗೆ ನೋಟಿಸ್‌

Published:
Updated:
ಓಲಾ, ಉಬರ್‌ ಕಂಪನಿಗಳಿಗೆ ನೋಟಿಸ್‌

ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲು ಮಾಡುತ್ತಿರುವ ಬಗ್ಗೆ ಓಲಾ ಮತ್ತು ಉಬರ್‌ ಕಂಪನಿಗಳಿಗೆ ಸಾರಿಗೆ ಆಯುಕ್ತರು ನೋಟಿಸ್‌ ನೀಡಿದ್ದಾರೆ.

ಮೊಬೈಲ್‌ ಆ್ಯಪ್‌ ಆಧಾರಿತಟ್ಯಾಕ್ಸಿ ಸೇವೆ ಒದಗಿಸುವ ಬಗ್ಗೆ ರಾಜ್ಯಸರ್ಕಾರ ‘ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಗಳು– 2016’ ಅನ್ನು ಜಾರಿಗೆ ತಂದಿದೆ. ಈ ನಿಯಮದಡಿ ಕ್ಯಾಬ್‌ ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಯಾಣದ ದರಗಳನ್ನು ನಿಗದಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್‌ 3ರಂದು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸಮಯದ ಆಧಾರದಲ್ಲಿ ದರಗಳನ್ನು ವಸೂಲಿ ಮಾಡಬಾರದು. ಕಿಲೋಮೀಟರ್‌ ಆಧಾರದಲ್ಲಿ ನಿಗದಿಪಡಿಸಿದ ದರಗಳನ್ನು ಮಾತ್ರ ಪ್ರಯಾಣಿಕರಿಂದ ವಸೂಲು ಮಾಡಬೇಕು ಎಂದು ತಿಳಿಸಿದೆ.

ಆದರೆ, ಕ್ಯಾಬ್‌ ಕಂಪೆನಿಗಳು ಸಮಯದ ಆಧಾರದಲ್ಲಿ ದರ ಮತ್ತು ಸರ್ಜ್ಪ್ರೈಸಿಂಗ್ (ಬೇಡಿಕೆಗೆ ತಕ್ಕಂತೆ ದರ ಏರಿಕೆ) ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲು ಮಾಡುತ್ತಿರುವುದು ಕಂಡುಬಂದಿದೆ. ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಪರವಾನಗಿ ಏಕೆ ಅಮಾನತು ಅಥವಾ ರದ್ದುಗೊಳಿಸಬಾರದು ಎನ್ನುವ ಬಗ್ಗೆ ಆಯುಕ್ತರು ಕ್ಯಾಬ್‌ ಕಂಪನಿಗಳಿಂದ ವಿವರಣೆ ಕೇಳಿದ್ದಾರೆ.

ಆ್ಯಪ್ ಆಧಾರಿತ ಟ್ಯಾಕ್ಸಿಗಳ ಬಾಡಿಗೆದರ ನಿಯಂತ್ರಣಕ್ಕೆ ಸರ್ಕಾರ ಹೊಸ ನಿಯಮ ರೂಪಿಸಿದ್ದರೂ ಚಾಲಕರು ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಬಗ್ಗೆ ಗ್ರಾಹಕರು ದೂರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry