ಬಸ್ ಡಿಕ್ಕಿ ಹೊಡೆದು ಹೆಡ್ ಕಾನ್ಸ್ಟೆಬಲ್ ಸಾವು
ಬೆಂಗಳೂರು: ಖಾಸಗಿ ಬಸ್ ಡಿಕ್ಕಿ ಹೊಡೆದು ನಗರದ ವೈಯಾಲಿಕಾವಲ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ದಯಾನಂದ ವಿ.ಆರ್ (36) ಮೃತಪಟ್ಟ ಪ್ರಕರಣ ಹೆಬ್ಬಾಳ ಪ್ಲೈಓವರ್ನಲ್ಲಿ ಶನಿವಾರ ರಾತ್ರಿ 7.15ರ ಸುಮಾರಿಗೆ ನಡೆದಿದೆ.
ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ದಯಾನಂದ ಅವರು ಸಂಜೆ ಯಲಹಂಕದಲ್ಲಿರುವ ಪತ್ನಿಯ ಮನೆಗೆ ಬೈಕ್ನಲ್ಲಿ ಹೊರಟಾಗ ಹಿಂದಿನಿಂದ ಬಂದ ಬಸ್, ಬೈಕ್ಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ದಯಾನಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
‘ಬೈಕ್ ಬಸ್ ಗುದ್ದಿಸಿದ ಚಾಲಕ ಬಸ್ ಅನ್ನು ದೇವನಹಳ್ಳಿ ಚೆಕ್ಪೋಸ್ಟ್ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ‘ ಎಂದು ಹೆಬ್ಬಾಳ ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ದಾಸನಪುರ ಹೋಬಳಿಯ ವಡ್ಡೇರಹಳ್ಳಿ ಗ್ರಾಮದ ನಿವಾಸಿ ದಯಾನಂದ ಅವರಿಗೆ ಪತ್ನಿ, ಐದು ವರ್ಷದ ಮಗ ಮತ್ತು ಒಂದೂವರೆ ವರ್ಷದ ಮಗಳಿದ್ದಾಳೆ.
ಪ್ರತಿಕ್ರಿಯಿಸಿ (+)