245 ಉಮೇದುವಾರರಿಂದ ನಾಮಪತ್ರ ಸಲ್ಲಿಕೆ

7
ಐದು ಗ್ರಾಮ ಪಂಚಾಯಿತಿಗಳ 87 ಸ್ಥಾನಕ್ಕೆ ಚುನಾವಣೆ

245 ಉಮೇದುವಾರರಿಂದ ನಾಮಪತ್ರ ಸಲ್ಲಿಕೆ

Published:
Updated:

ಆಳಂದ: ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಸಂಬಂಧಿಸಿದಂತೆ ಶನಿವಾರವೂ ಸೇರಿ ಒಟ್ಟು 245 ಅಭ್ಯರ್ಥಿಗಳು ಆಯಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನಾಮಪತ್ರ ಸಲ್ಲಿಸಿದರು.

ಚುನಾವಣೆ ಬಹಿಷ್ಕರಿಸಲು ನಿರ್ಧಿಸಿದ ಮಟಕಿ ಗ್ರಾಮಸ್ಥರು ಸಹ ನಾಮಪತ್ರ ಸಲ್ಲಿಕೆಯಾಗಿವೆ. ಹಿತ್ತಲಶಿರೂರು ಗ್ರಾಮ ಪಂಚಾಯಿತಿಯ 17 ಸ್ಥಾನಗಳ ಚುನಾವಣೆಗೆ ಒಟ್ಟು 74 ಜನ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದರು. ದಣ್ಣೂರು ಗ್ರಾಮ ಪಂಚಾಯಿತಿ 12 ಸ್ಥಾನಕ್ಕೆ ಆಯ್ಕೆ ಬಯಸಿ 41 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಭೂಸನೂರು ಗ್ರಾಮ ಪಂಚಾಯಿತಿಯ ಒಟ್ಟು 15 ಸ್ಥಾನಕ್ಕೆ 36 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರೆ, ಧುತ್ತರಗಾಂವ ಗ್ರಾಮ ಪಂಚಾಯಿತಿಯ 21 ಸ್ಥಾನಗಳಿಗೆ ಒಟ್ಟು 53 ಜನರಿಂದ ನಾಮಪತ್ರ ಸಲ್ಲಿಕೆಯಾಗಿವೆ.

ನಿರಗುಡಿ ಗ್ರಾಮ ಪಂಚಾಯಿತಿಯ 22 ಸ್ಥಾನಗಳಿಗೆ 41 ಜನ, ನಿರುಗುಡಿ ಗ್ರಾಮದ 8 ಸ್ಥಾನಕ್ಕೆ 8 ಜನ ಮಾತ್ರ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಗೆ ಗ್ರಾಮಸ್ಥರು ಒಲುವು ತೋರಿಸಿದ್ದಾರೆ.

ಚುನಾವಣೆ ಬಹಿಷ್ಕಾರ ಹಿಂದಕ್ಕೆ: ನಿರಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟಕಿ ಗ್ರಾಮಸ್ಥರು ಪಂಚಾಯಿತಿ ಕೇಂದ್ರ ಸ್ಥಾನಕ್ಕೆ ಒತ್ತಾಯಿಸಿ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದ್ದರು. ಆದರೆ, ತಹಶೀಲ್ದಾರ್ ಫಿರ್ಜಾದೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ, ಡಿವೈಎಸ್‌ಪಿ ವಿಜಯಕುಮಾರ, ಉಪ ತಹಶೀಲ್ದಾರ್ ಬಿ.ಜಿ.ಕುದುರಿ ಅಧಿಕಾರಿಗಳು ಮಟಕಿ ಗ್ರಾಮಕ್ಕೆ ಭೇಟಿ ನೀಡಿ, ಮನವೊಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry