ಪೊಲೀಸರ ವಾಹನದಡಿ ಕುಳಿತು ಪ್ರತಿಭಟನೆ

7

ಪೊಲೀಸರ ವಾಹನದಡಿ ಕುಳಿತು ಪ್ರತಿಭಟನೆ

Published:
Updated:
ಪೊಲೀಸರ ವಾಹನದಡಿ ಕುಳಿತು ಪ್ರತಿಭಟನೆ

ಮೈಸೂರು: ‘ನೋ ಪಾರ್ಕಿಂಗ್‌’ ಜಾಗದಲ್ಲಿ ನಿಲ್ಲಿಸಿದ್ದ ಬೈಕನ್ನು ಹೊತ್ತೊಯ್ಯುತ್ತಿದ್ದ ಪೊಲೀಸರ ಟೈಗರ್‌ ವಾಹನದ ಚಕ್ರದಡಿ ಕುಳಿತ ಬೈಕ್‌ ಮಾಲೀಕ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಶಿವರಾಂಪೇಟೆಯ ಚಿಕ್ಕಗಡಿಯಾರದ ಬಳಿ ನಿಲ್ಲಿಸಿದ್ದ ಬೈಕನ್ನು ಟೈಗರ್‌ ವಾಹನದಲ್ಲಿ ಪೊಲೀಸರು ಎತ್ತಿ ಇರಿಸಿಕೊಂಡಿದ್ದಾರೆ. ಕೂಡಲೇ ಇದನ್ನು ವಿರೋಧಿಸಿದ ಬೈಕ್‌ ಮಾಲೀಕ, ‘ನೋ ಪಾರ್ಕಿಂಗ್‌ ಜಾಗ ಎಂದು ಹೇಗೆ ಹೇಳುತ್ತೀರ? ಇಲ್ಲಿ ನೋ ಪಾರ್ಕಿಂಗ್‌ ಬೋರ್ಡೇ ಇಲ್ಲವಲ್ಲ’ ಎಂದು ಪ್ರಶ್ನಿಸಿದ್ದಾರೆ.

ಬೈಕ್‌ ಮಾಲೀಕನನ್ನು ತಡೆದ ಪೊಲೀಸರು ಟೈಗರ್ ವಾಹನವನ್ನು ಚಾಲನೆ ಮಾಡಿದ್ದಾರೆ. ವ್ಯಕ್ತಿಯು ಕೂಡಲೇ ಟೈಗರ್‌ ವಾಹನದ ಚಕ್ರದಡಿ ಕುಳಿತು ವಾಹನ ಮುಂದೆ ಹೋಗದಂತೆ ತಡೆದಿದ್ದಾರೆ. ವ್ಯಕ್ತಿಯ ಪಟ್ಟಿಗೆ ಮಣಿದ ಪೊಲೀಸರು ಬೈಕನ್ನು ವಾಹನದಿಂದ ಕೆಳಗಿಳಿಸಿದ್ದಾರೆ.

ಪೊಲೀಸರು ಬೈಕು ‘ನೋ ಪಾರ್ಕಿಂಗ್‌’ನಲ್ಲಿ ನಿಲ್ಲಿಸಿರುವುದನ್ನು ಮೊದಲೇ ಚಿತ್ರೀಕರಿಸಿಕೊಂಡಿದ್ದು, ಇದರ ಆಧಾರದ ಮೇಲೆ ಮನೆಗೆ ನೋಟಿಸ್ ಕಳುಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry