4

ಬಿಜೆಪಿ ವಿರೋಧಿ ‘ಮಹಾ ಮೈತ್ರಿಕೂಟ’ ರಚಿಸಲು ಶರದ್‌ ಯಾದವ್‌ ಬಣ ಸಿದ್ಧತೆ

Published:
Updated:
ಬಿಜೆಪಿ ವಿರೋಧಿ ‘ಮಹಾ ಮೈತ್ರಿಕೂಟ’ ರಚಿಸಲು ಶರದ್‌ ಯಾದವ್‌ ಬಣ ಸಿದ್ಧತೆ

ಭೋಪಾಲ್‌: ಮಧ್ಯಪ್ರದೇಶದಲ್ಲಿ 2019ರ ಅಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಬಿಜೆಪಿ ವಿರುದ್ಧದ ಮಹಾ ಮೈತ್ರಿಕೂಟವನ್ನು ರಚಿಸಲು ಜೆಡಿ(ಯು) ಪಕ್ಷದ ಬಂಡಾಯ ನಾಯಕ ಶರದ್‌ ಯಾದವ್‌ ಬೆಂಬಲಿಗರು ಸಿದ್ಧತೆ ನಡೆಸಿದ್ದಾರೆ.

ಸದ್ಯ ರಾಜ್ಯದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಅನ್ನು ಮೈತ್ರಿಕೂಟಕ್ಕೆ ಸೆಳೆಯಲು ಯಾದವ್‌ ಬೆಂಬಲಿಗರು ಪ್ರಯತ್ನಿಸುತ್ತಿದ್ದು, ಸಾಂಘಿಕ ಹೋರಾಟದ ಮೂಲಕ 2003ರಿಂದಲೂ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಯೋಜನೆ ರೂಪಿಸಿದ್ದಾರೆ.

‘ನಾವು ಕಾಂಗ್ರೆಸ್‌ ಬೆಂಬಲದೊಂದಿಗೆ ಮಹಾ ಮೈತ್ರಿಕೂಟ ರಚಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ' ಎಂದು ಜೆಡಿ(ಯು) ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮತ್ತು ಶರದ್‌ ಯಾದವ್‌ ಆಪ್ತ ಗೋವಿಂದ ಯಾದವ್‌ ಹೇಳಿದ್ದಾರೆ.

ಯಾದವ್‌ ಬೆಂಬಲಿಗರು ಲೋಕ ತಾಂತ್ರಿಕ್‌ ಜನತಾ ದಳ(ಎಲ್‌ಜೆಡಿ) ಹೆಸರಿನ ಹೊಸ ಪಕ್ಷ ಕಟ್ಟುವುದಾಗಿ ಏಪ್ರಿಲ್‌ನಲ್ಲಿಯೇ ಘೋಷಿಸಿದ್ದರು.

15 ವರ್ಷಗಳ ಹಿಂದೆಯೇ ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ ಕೂಡ ಸಮಾನ ಮನಸ್ಕ ಪಕ್ಷಗಳೊಡನೆ ಕೈಜೋಡಿಸುವ ಬಯಕೆಯನ್ನು ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸಿದೆ.


**

ಶರದ್‌ ಯಾದವ್‌ ಗುಂಪಿನಿಂದ ಹೊಸ ಪಕ್ಷ

ಶರದ್ ಯಾದವ್‌ರಿಂದ ನೂತನ ಪಕ್ಷ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry