ಸೆರೆನಾ ಫ್ಯಾಷನ್ ಮೇನಿಯಾ...

7

ಸೆರೆನಾ ಫ್ಯಾಷನ್ ಮೇನಿಯಾ...

Published:
Updated:
ಸೆರೆನಾ ಫ್ಯಾಷನ್ ಮೇನಿಯಾ...

ಅಮೆರಿಕದ ಸೆರೆನಾ ವಿಲಿಯಮ್ಸ್‌  ಅವರ ಟೆನಿಸ್  ಆಟದಷ್ಟೇ ಅವರ ಫ್ಯಾಷನ್ ಕೂಡ ಜನಪ್ರಿಯ. ಒಂದೊಂದು ಟೂರ್ನಿಗಳಲ್ಲಿ ಒಂದೊಂದು ಬಗೆಯ ಪೋಷಾಕು ಧರಿಸಿ ಕಣಕ್ಕಿಳಿಯುವ ಹವ್ಯಾಸ ಅವರದ್ದು. ಇದೀಗ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅವರು ಧರಿಸಿರುವ ಕ್ಯಾಟ್‌ ಸೂಟ್ (ಮಾರ್ಜಾಲ ಪೋಷಾಕು) ಭಾರಿ ಸುದ್ದಿ ಮಾಡಿದೆ.

ಎದುರಾಳಿ ಆಟಗಾರ್ತಿಯರಿಂದ ಅಸಮಾಧಾನದ ಕಿಡಿನುಡಿಗಳು ಹೊರಹೊಮ್ಮಿವೆ. ಆದರೆ ಸೆರೆನಾ ಮಾತ್ರ ತಲೆಕೆಡಿಸಿಕೊಂಡಿಲ್ಲ. ಅಮೆರಿಕದ ಆಟಗಾರ್ತಿ ಆ್ಯನೆ ವೈಟ್ ಅವರು 1985ರಲ್ಲಿ ಒಂದು ಪಂದ್ಯದಲ್ಲಿ ಬಿಳಿಬಣ್ಣದ ಕ್ಯಾಟ್‌ ಸೂಟ್ ಹಾಕಿ ಕಣಕ್ಕಿಳಿದಿದ್ದರು. ಆದರೆ ಆಯೋಜಕರ ಮನವಿಯ ನಂತರ ಎರಡನೇ ಪಂದ್ಯದಲ್ಲಿ ಅವರು ಬೇರೆ ಪೋಷಾಕು ಧರಿಸಿದ್ದರು.

ಆದರೆ ಸೆರೆನಾ ಹಾಗಲ್ಲ. ಅವರು ಟೆನಿಸ್‌ ಅಂಗಳದಲ್ಲಿ ಆಡಿದ್ದೇ ಆಟ, ನಡೆದಿದ್ದೇ ದಾರಿ.

‘ನನ್ನ ಆರೋಗ್ಯದ ದೃಷ್ಟಿಯಿಂದ ಈ ಪೋಷಾಕು ಧರಿಸುವುದು ಅಗತ್ಯವಾಗಿದೆ. ನರನಾಡಿಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಇದನ್ನು ಧರಿಸುತ್ತಿದ್ದೇನೆ’ ಎಂದು 36 ವರ್ಷದ ಸೆರೆನಾ ಹೇಳಿದ್ದಾರೆ.

ಆದರೆ ಟೆನಿಸ್‌ ಅಂಕಣದಲ್ಲಿ ಮತ್ತು ಹೊರಗೆ ಅವರು ವಿನೂತನ ಪೋಷಾಕುಗಳಿಂದ ಗಮನ ಸೆಳೆಯುವುದು ಹೊಸದಲ್ಲ. ಅವರ ವಸ್ತ್ರಪ್ರೀತಿಯ ನೋಟ ಇಲ್ಲಿದೆ.

**

ಆಮೆರಿಕ ಓಪನ್ ಟೆನಿಸ್ (2004)

**

ಮುಬಾದಲಾ ವಿಶ್ವ ಟೆನಿಸ್ ಚಾಂಪಿಯನ್‌ಷಿಪ್ (2017)

**

ಫೆಡರೇಷನ್ ಕಪ್ (2018) ಎಪಿ ಚಿತ್ರ

**

ಫ್ರೆಂಚ್ ಓಪನ್ ಟೂರ್ನಿ (2004)  ಎಎಫ್‌ಪಿ ಚಿತ್ರ

**

2017ರಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry