ಆದೇಶ ಪಾಲನೆ ಏಕಿಲ್ಲ?

7

ಆದೇಶ ಪಾಲನೆ ಏಕಿಲ್ಲ?

Published:
Updated:

ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಗಳನ್ನು ತೆರವು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಉತ್ತರ ಪ್ರದೇಶದ ಕೆಲವು ಮಾಜಿ ಮುಖ್ಯಮಂತ್ರಿಗಳು ತಮ್ಮ ನಿವಾಸಗಳನ್ನು ಖಾಲಿ ಮಾಡದಿರುವುದು ವರದಿಯಾಗಿದೆ. ರಾಜಕಾರಣಿಗಳು ನ್ಯಾಯಾಲಯದ ಆದೇಶವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಇದು ತಿಳಿಸುತ್ತದೆ.

ಒಬ್ಬರಂತೂ ತಮ್ಮ ವಶದಲ್ಲಿದ್ದ ಎರಡು ಬಂಗಲೆಗಳ ಪೈಕಿ ಒಂದನ್ನು ತ್ಯಜಿಸಿ ಮತ್ತೊಂದನ್ನು ತಮ್ಮ ಪಕ್ಷದ ಸಂಸ್ಥಾಪಕರ ಹೆಸರಿನಲ್ಲಿ ಸ್ಮಾರಕವನ್ನಾಗಿಸಿದ್ದಾರಂತೆ! ಜನಪ್ರತಿನಿಧಿಗಳಾಗಿದ್ದವರ ಈ ವರ್ತನೆ ಸರಿಯಲ್ಲ.

ಅಧಿಕಾರದ ಸವಿ ನೋಡಿದವರಿಗೆ ಸ್ವಂತಕ್ಕೆ ಒಂದು ಮನೆ ಮಾಡಿಕೊಳ್ಳಲಾಗದಷ್ಟು ಬಡತನವಿದೆಯೇ? ಒಂದುವೇಳೆ ಇದೆ ಎಂದು ಅವರು ಹೇಳಿದರೂ ಅದನ್ನು ಜನರು ನಂಬಬೇಕೇ?

ಬಿ. ರಮೇಶ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry