ಈಜಲು ಹೋದ ಮೂರು ಮಕ್ಕಳ ಸಾವು

7

ಈಜಲು ಹೋದ ಮೂರು ಮಕ್ಕಳ ಸಾವು

Published:
Updated:

ಶಿವಮೊಗ್ಗ: ತಾಲ್ಲೂಕಿನ ತಮ್ಮಡಿಹಳ್ಳಿ ಸಮೀಪದ ಜಂಗ್ಲಿ ಕೆರೆಯಲ್ಲಿ ಈಜಲು ಹೋದ ಮೂವರು ಮಕ್ಕಳು ಭಾನುವಾರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ತಮ್ಮಡಿಹಳ್ಳಿಯ ವಸಂತ್ (14), ಚಿರಂತ್ (14) ಹಾಗೂ ಅಜೇಯ(11) ಮೃತರು.

ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಜಂಗ್ಲಿ ಕೆರೆಯಲ್ಲಿ ಈಜಲು ಎಂಟು ಬಾಲಕರು ಹೋಗಿದ್ದಾರೆ. ಕೆಲ ದಿನಗಳಿಂದ ಮಳೆ ಸುರಿದಿದ್ದ ಪರಿಣಾಮ ಕೆರೆಗೆ ಸಾಕಷ್ಟು ನೀರು ಹರಿದುಬಂದಿತ್ತು. ನೀರಿನ ಆಳ ಅರಿಯದೇ ಮಕ್ಕಳು ಮುಳುಗಿದ್ದಾರೆ. ಉಳಿದವರು ಹೆದರಿ ಸ್ಥಳದಿಂದ ಓಡಿಹೋಗಿದ್ದಾರೆ.

‘ತಮ್ಮಡಿಹಳ್ಳಿಯಲ್ಲಿ ಭಾನುವಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ದೊಡ್ಡವರ‍್ಯಾರೂ ಸ್ಥಳದಲ್ಲಿ ಇರಲಿಲ್ಲ. ಹಾಗಾಗಿ, ಬಾಲಕರನ್ನು ರಕ್ಷಿಸಲು ಸಾಧ್ಯವಾಗಿಲ್ಲ’ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry