ರಾಜ್ಯ ಜೂನಿಯರ್‌, ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ಗೆ ತೆರೆ: ಶ್ರೀಹರಿ ರಾಷ್ಟ್ರೀಯ ದಾಖಲೆ

7
ಬಿಎಸಿ, ಡಾಲ್ಫಿನ್‌ ತಂಡಗಳಿಗೆ ಸಮಗ್ರ ಪ್ರಶಸ್ತಿ

ರಾಜ್ಯ ಜೂನಿಯರ್‌, ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ಗೆ ತೆರೆ: ಶ್ರೀಹರಿ ರಾಷ್ಟ್ರೀಯ ದಾಖಲೆ

Published:
Updated:
ರಾಜ್ಯ ಜೂನಿಯರ್‌, ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ಗೆ ತೆರೆ: ಶ್ರೀಹರಿ ರಾಷ್ಟ್ರೀಯ ದಾಖಲೆ

ಮೈಸೂರು: ಬೆಂಗಳೂರಿನ ಬಸವನಗುಡಿ ಈಜು ಕೇಂದ್ರ (ಬಿಎಸಿ) ಮತ್ತು ಡಾಲ್ಫಿನ್ ಈಜು ಕೇಂದ್ರ ತಂಡಗಳು ಭಾನುವಾರ ಇಲ್ಲಿ ಕೊನೆಗೊಂಡ ರಾಜ್ಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡವು.

ಮೈಸೂರು ವಿ.ವಿ. ಈಜುಕೊಳದಲ್ಲಿ ನಾಲ್ಕು ದಿನ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಬಿಎಸಿ ಒಟ್ಟು 681 ಪಾಯಿಂಟ್‌ಗಳನ್ನು ಕಲೆಹಾಕಿತು. ಡಾಲ್ಫಿನ್‌ ತಂಡ 231 ಪಾಯಿಂಟ್‌ಗಳ ಮೂಲಕ ಅಗ್ರಸ್ಥಾನ ಪಡೆಯಿತು.

563 ಪಾಯಿಂಟ್‌ ಕಲೆಹಾಕಿದ ಬೆಂಗಳೂರು ಸ್ವಿಮ್ಮಿಂಗ್‌ ರಿಸರ್ಚ್‌ ಸೆಂಟರ್‌ (ಬಿಎಸ್‌ಆರ್‌ಸಿ) ಜೂನಿಯರ್‌ ವಿಭಾಗದಲ್ಲಿ ‘ರನ್ನರ್‌ ಅಪ್‌’ ಎನಿಸಿ ಕೊಂಡರೆ, 182 ಪಾಯಿಂಟ್‌ ಸಂಗ್ರ ಹಿಸಿದ ಬಿಎಸಿ ತಂಡ ಸಬ್‌ ಜೂನಿಯರ್‌ ವಿಭಾಗದ ‘ರನ್ನರ್‌ ಅಪ್‌’ ಆಯಿತು.

ಶ್ರೀಹರಿ ರಾಷ್ಟ್ರೀಯ ದಾಖಲೆ: ಬಿಎಸ್‌ಆರ್‌ಸಿಯ ಶ್ರೀಹರಿ ನಟರಾಜ್‌ ಅವರು ಅಂತಿಮ ದಿನ ರಾಷ್ಟ್ರೀಯ ದಾಖಲೆ ರಚಿಸಿದರು. ಬಾಲಕರ ಗುಂಪು–1ರ 200 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಅವರು 1 ನಿಮಿಷ 54.73 ಸೆಕೆಂಡುಗಳಲ್ಲಿ ಗುರಿ ತಲುಪಿದರು. ವೀರ್‌ಧವಳ್‌ ಖಾಡೆ ಅವರು 2008 ರಲ್ಲಿ ಮಾಡಿದ್ದ ದಾಖಲೆಯನ್ನು (1:54.90 ಸೆ.) ಅವರು ಮುರಿದರು.

100 ಮೀ. ಬಟರ್‌ಫ್ಲೈ ಸ್ಪರ್ಧೆ ಯಲ್ಲೂ ಮಿಂಚಿದ ಶ್ರೀಹರಿ ಅಗ್ರಸ್ಥಾನ ಪಡೆದರು. ಅವರು 57.78 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬಿಎಸ್‌ಆರ್‌ಸಿಯ ತನಿಷ್‌ ಜಾರ್ಜ್‌ ಮ್ಯಾಥ್ಯೂ ಮತ್ತು ಪ್ರಸಿದ್ಧ್‌ ಕೃಷ್ಣ ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಬಿಎಸಿಯ ಸಲೋನಿ ದಲಾಲ್‌ ಮತ್ತು ಬಿಎಸ್‌ಆರ್‌ಸಿಯ ಪಿ.ಕುಶಾಲ್‌ ಅವರು 200 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದರು.

ವಾಟರ್‌ ಪೋಲೊ: ವಾಟರ್‌ ಪೋಲೊ ಸ್ಪರ್ಧೆಯಲ್ಲಿ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಬಿಎಸಿ ಚಾಂಪಿಯನ್‌ ಆದರೆ, ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರ ‘ರನ್ನರ್‌ ಅಪ್‌’ ಸ್ಥಾನ ಪಡೆಯಿತು.

ಅಂತಿಮ ದಿನದ ಫಲಿತಾಂಶದ ವಿವರ: ಬಾಲಕರ ವಿಭಾಗ (ಗುಂಪು–1)

100 ಮೀ. ಬಟರ್‌ಫ್ಲೈ: ಶ್ರೀಹರಿ ನಟರಾಜ್ (ಬಿಎಸ್‌ಆರ್‌ಸಿ)–1, ತನಿಷ್‌ ಜಾರ್ಜ್‌ ಮ್ಯಾಥ್ಯೂ (ಬಿಎಸ್‌ಆರ್‌ಸಿ)–2, ಪ್ರಸಿದ್ಧ್‌ ಕೃಷ್ಣ (ಬಿಎಸ್‌ಆರ್‌ಸಿ)–3. ಕಾಲ: 57.78 ಸೆ. 200 ಮೀ. ಫ್ರೀಸ್ಟೈಲ್: ಶ್ರೀಹರಿ ನಟರಾಜ್ (ಬಿಎಸ್‌ಆರ್‌ಸಿ)–1, ಸಿ.ಜೆ.ಸಂಜಯ್ (ಡಾಲ್ಫಿನ್), ರಾಜ್‌ ವಿನಾಯಕ್ (ಡಾಲ್ಫಿನ್)–3. ಕಾಲ: 1 ನಿಮಿಷ. 54.73 ಸೆ. 200 ಮೀ. ಬ್ರೆಸ್ಟ್‌ ಸ್ಟ್ರೋಕ್: ಪಿ.ಕುಶಾಲ್ (ಬಿಎಸ್‌ಆರ್‌ಸಿ)–1, ಲಿತೀಶ್‌ ಜಿ.ಗೌಡ (ಬಿಎಸಿ)–2, ನೀಲ್‌ ಮಸ್ಕರೇನಸ್ (ಪುತ್ತೂರು ಈಜು ಕೇಂದ್ರ)–3. ಕಾಲ: 2 ನಿ. 32.97 ಸೆ. ಗುಂಪು–2: 100 ಮೀ. ಬಟರ್‌ಫ್ಲೈ: ಸಮರ್ಥ್‌ ಸುಬ್ರಮಣ್ಯರಾವ್ (ಬಿಎಸ್‌ಆರ್‌ಸಿ)–1, ಉತ್ಕರ್ಷ್‌ ಎಸ್‌.ಪಾಟೀಲ (ಬಿಎಸಿ)–2, ಆರ್.ಸಂಭವ್ (ಬಿಎಸ್‌ಆರ್‌ಸಿ)–3. ಕಾಲ: 1 ನಿ. 3.35 ಸೆ. 200 ಮೀ.ಫ್ರೀಸ್ಟೈಲ್: ಕಪಿಲ್ ಡಿ.ಶೆಟ್ಟಿ (ಡಾಲ್ಫಿನ್)–1, ಕೌಸ್ತುಭ್‌ ಅಗರ್‌ವಾಲ್ (ಬಿಎಸಿ)–2, ಅಕ್ಷಯ್‌ ಶೇಟ್ (ಬಿಎಸ್‌ಆರ್‌ಸಿ)–3. ಕಾಲ: 2 ನಿ. 4.61 ಸೆ. 200 ಮೀ. ಬ್ರೆಸ್ಟ್‌ಸ್ಟ್ರೋಕ್: ಕಲ್ಪ್‌ ಎಸ್‌.ಬೊಹ್ರಾ (ಪೂಜಾ ಈಜು ಕೇಂದ್ರ)–1, ಅದಿತ್‌ ಸ್ಮರಣ್‌ ಒಲೇತಿ (ಬಿಎಸಿ)–2, ಆರ್‌.ಹರ್ಷ (ಬಿಎಸ್‌ಆರ್‌ಸಿ)–3. ಕಾಲ: 2 ನಿ. 35.31 ಸೆ. ಗುಂಪು–3: 50 ಮೀ. ಬ್ರೆಸ್ಟ್‌ ಸ್ಟ್ರೋಕ್: ವಿದಿತ್‌ ಎಸ್‌.ಶಂಕರ್‌ (ಡಾಲ್ಫಿನ್)–1, ಕೃಷ್ ಕುಮಾರ್ (ಡಾಲ್ಫಿನ್)–2, ಎಲ್‌.ಸುಯೋಗ್ ಗೌಡ (ನೆಟ್ಟಕಲ್ಲಪ್ಪ ಈಜು ಕೇಂದ್ರ)–3. ಕಾಲ: 37.67 ಸೆ. 50 ಮೀ. ಬ್ಯಾಕ್‌ಸ್ಟ್ರೋಕ್: ಅಮಯ್‌ ಪಾಟೀಲ (ಅಕ್ವಾ ಈಜು ಕೇಂದ್ರ)–1, ಆಕಾಶ್‌ ಮಣಿ (ಬಿಎಸಿ)–2, ಯಜತ್‌ ಅಯ್ಯಪ್ಪ (ಮತ್ಸ್ಯ ಇಂಕ್)–3. ಕಾಲ: 34.40 ಸೆ.ಸಬ್‌ ಜೂನಿಯರ್‌ ವಿಭಾಗದಲ್ಲಿ ಚಾಂಪಿಯನ್‌ ಆದ ಬೆಂಗಳೂರಿನ ಡಾಲ್ಫಿನ್‌ ಈಜು ಕೇಂದ್ರ ತಂಡ

ಬಾಲಕಿಯರ ವಿಭಾಗ (ಗುಂಪು–1): 100 ಮೀ. ಬಟರ್‌ಫ್ಲೈ: ಸ್ಮೃತಿ ಮಹಾ ಲಿಂಗಂ (ಬಿಎಸ್‌ಆರ್‌ಸಿ)–1, ಸಾನ್ಯಾ ಡಿ.ಶೆಟ್ಟಿ (ಮಂಗಳಾ ಈಜು ಕೇಂದ್ರ)–2, ಎಸ್‌.ತನುಜಾ (ಬಿಎಸಿ)–3. ಕಾಲ: 1 ನಿ. 9.05 ಸೆ. 200 ಮೀ. ಫ್ರೀಸ್ಟೈಲ್: ಖುಷಿ ದಿನೇಶ್ (ಬಿಎಸಿ)–1, ಬಿ.ಜಿ.ಮಧುರಾ (ಬಿಎಸಿ)–2, ಅಭಿಜ್ಞಾ ಆನಂದ್ (ಪೂಜಾ ಈಜು ಕೇಂದ್ರ)–3. ಕಾಲ: 2 ನಿ. 16.72 ಸೆ. 200 ಮೀ. ಬ್ರೆಸ್ಟ್‌ ಸ್ಟ್ರೋಕ್: ಸಲೋನಿ ದಲಾಲ್ (ಬಿಎಸಿ)–1, ಹರ್ಷಿತಾ ಜಯರಾಂ (ಬಿಎಸ್‌ಆರ್‌ಸಿ)–2, ಸಿದ್ದಿ ಜೆ. (ಬಿಎಸಿ)–3. ಕಾಲ: 2 ನಿ. 53.29 ಸೆ.

ಗುಂಪು–2: 100 ಮೀ. ಬಟರ್‌ಫ್ಲೈ: ಲತೀಶಾ ಮಂದಣ್ಣ (ವೈಸಿಎಸ್‌ಸಿ)–1, ಆದ್ಯ ನಾಯಕ್ (ಬಿಎಸಿ)–2, ಅನ್ವೇಶಾ ಗಿರೀಶ್‌ (ವಿಜಯನಗರ ಈಜು ಕೇಂದ್ರ)–3. ಕಾಲ: 1 ನಿ. 10.13 ಸೆ. 200 ಮೀ. ಫ್ರೀಸ್ಟೈಲ್: ದಿವ್ಯಾ ಘೋಷ್ (ಬಿಎಸ್‌ಆರ್‌ಸಿ)–1, ಸಮನ್ವಿತಾ ರವಿಕುಮಾರ್ (ಅಕ್ವಾ ಈಜು ಕೇಂದ್ರ)–2, ಪಿ.ವೈಷ್ಣವಿ (ಬಿಎಸಿ)–3. ಕಾಲ: 2 ನಿ. 18.07 ಸೆ. 200 ಮೀ. ಬ್ರೆಸ್ಟ್‌ ಸ್ಟ್ರೋಕ್‌: ರಚನಾ ಎಸ್‌.ಆರ್‌. ರಾವ್ (ಮಂಗಳಾ ಈಜು ಕೇಂದ್ರ)–1, ಸಾನ್ವಿ ಎಸ್‌.ರಾವ್ (ಬಿಎಸ್‌ಆರ್‌ಸಿ)–2, ಆರುಷಿ ಮಂಜುನಾಥ್ (ಡಾಲ್ಫಿನ್)–3. ಕಾಲ: 2 ನಿ. 48.17 ಸೆ. ಗುಂಪು–3: 50 ಮೀ. ಬ್ರೆಸ್ಟ್‌ ಸ್ಟ್ರೋಕ್: ವಿ.ಹಿತೈಷಿ (ವಿಜಯನಗರ ಈಜು ಕೇಂದ್ರ)–1, ಅನ್ವಿತಾ ಎ.ಗೌಡ (ಡಾಲ್ಫಿನ್)–2, ರಿಯಾ ಗಿರೀಶ್ (ಬಿಎಸಿ)–3. ಕಾಲ: 39.19 ಸೆ.

50 ಮೀ. ಬ್ಯಾಕ್‌ಸ್ಟ್ರೋಕ್: ರಿಧಿಮಾ ವೀರೇಂದ್ರ ಕುಮಾರ್ (ಬಿಎಸಿ)–1, ಇಮಾನಿ ಜಾಧವ್ (ಸ್ವಿಮ್ಮರ್ಸ್ ಕ್ಲಬ್‌ ಬೆಳಗಾವಿ)–2, ಸುವಲಿ ಪಿ.ಶೆಟ್ಟಿ (ಮಂಗ ಳೂರು ಕೇಂದ್ರ)–3. ಕಾಲ: 33.86 ಸೆ.

**

ವೈಯಕ್ತಿಕ ಪ್ರಶಸ್ತಿ ಗಳಿಸಿದವರು

ಬಾಲಕರ ವಿಭಾಗ
: ಗುಂಪು–1: ಶ್ರೀಹರಿ ನಟರಾಜ್‌ (ಬಿಎಸ್‌ಆರ್‌ಸಿ, 1035 ಪಾಯಿಂಟ್), ಗುಂಪು–2: ಕಪಿಲ್ ಡಿ.ಶೆಟ್ಟಿ (ಡಾಲ್ಫಿನ್, 85 ಪಾಯಿಂಟ್), ಗುಂಪು–3: ವಿದಿತ್‌ ಎಸ್‌.ಶಂಕರ್ (ಡಾಲ್ಫಿನ್, 78 ಪಾಯಿಂಟ್), ಗುಂಪು–4: ಆರ್‌.ನವನೀತ್ ಗೌಡ (ಡಾಲ್ಫಿನ್, 35 ಪಾಯಿಂಟ್)

ಬಾಲಕಿಯರ ವಿಭಾಗ: ಗುಂಪು–1: ಸುವನ ಸಿ.ಭಾಸ್ಕರ್ (ಡಾಲ್ಫಿನ್, 135 ಪಾಯಿಂಟ್), ಗುಂಪು–2: ರಚನಾ ಎಸ್‌.ಆರ್.ರಾವ್ (ಮಂಗಳಾ ಈಜು ಕೇಂದ್ರ, 1026 ಪಾಯಿಂಟ್), ಗುಂಪು–3: ಹಿತೈಷಿ (ವಿಎಸಿ, 72 ಪಾಯಿಂಟ್), ಗುಂಪು–4: ವಿಹಿತಾ ನಯನಾ (ಪೂಜಾ ಈಜು ಕೇಂದ್ರ, 38 ಪಾಯಿಂಟ್)

***

₹ 5 ಸಾವಿರ ಬಹುಮಾನ

ರಾಜ್ಯ ಈಜು ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸುವವರಿಗೆ ಕರ್ನಾಟಕ ರಾಜ್ಯ ಈಜು ಸಂಸ್ಥೆ ವತಿಯಿಂದ ₹ 5 ಸಾವಿರ ಮತ್ತು ನೂತನ ಕೂಟ ದಾಖಲೆ ಸ್ಥಾಪಿಸುವ ಸ್ಪರ್ಧಿಗಳಿಗೆ ₹ 3 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಸತೀಶ್‌ ಕುಮಾರ್‌ ಹೇಳಿದರು.

ಮೈಸೂರಿನಲ್ಲಿ ಭಾನುವಾರ ಕೊನೆಗೊಂಡ ಚಾಂಪಿಯನ್‌ ಷಿಪ್‌ನಲ್ಲಿ ಈ ಸಾಧನೆ ಮಾಡಿ ದವರಿಗೂ ನಗದು ಬಹುಮಾನ ನೀಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry