7

‘ಶಿವಸೇನಾ ಬಿಜೆಪಿಯ ಅತಿದೊಡ್ಡ ರಾಜಕೀಯ ಶತ್ರು’

Published:
Updated:
‘ಶಿವಸೇನಾ ಬಿಜೆಪಿಯ ಅತಿದೊಡ್ಡ ರಾಜಕೀಯ ಶತ್ರು’

ಮುಂಬೈ: ‘ಬಿಜೆಪಿಯ ಅತಿದೊಡ್ಡ ರಾಜಕೀಯ ಶತ್ರು ಶಿವಸೇನಾ’ ಎಂದು ಶಿವಸೇನಾ ಸಂಸದ ಸಂಜಯ್‌ ರಾವತ್‌ ವ್ಯಾಖ್ಯಾನಿಸಿದ್ದಾರೆ.

ಇತ್ತೀಚೆಗೆ ಪಾಲ್ಘರ್‌ನಲ್ಲಿ ಲೋಕಸಭಾ ಉಪಚುನಾವಣೆಯ ಸೋಲಿನ ನಂತರ, ಬಿಜೆಪಿ ವಿರುದ್ಧ ಅವರು ಈ ರೀತಿ ವಾಕ್‌ಪ್ರಹಾರ ನಡೆಸಿದ್ದಾರೆ.

‘ದೇಶವು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಅವರನ್ನು ಒಪ್ಪಿಕೊಳ್ಳುವುದಿಲ್ಲ, ಆದರೆ, ಕಾಂಗ್ರೆಸ್‌ ಅಥವಾ ಜೆಡಿಎಸ್‌ ನಾಯಕರಾಗಿ ಎಚ್.ಡಿ. ದೇವೇಗೌಡ ಅವರನ್ನು ಸ್ವೀಕರಿಸಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಶಿವಸೇನಾದ ಹಿಂದುತ್ವ ನಿಲುವು ಬಿಜೆಪಿಗೆ ಸಮಸ್ಯೆ ತಂದೊಡ್ಡಲಿದೆ’ ಎಂದು ಅವರು ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.

‘ಬಿಜೆಪಿ ಸಂಸದರಾಗಿದ್ದ ದಿವಂಗತ ಚಿಂತಾಮನ್‌ ವಾನಗ ಅವರ ಮಗನನ್ನು (ಶಿವಸೇನಾ ಅಭ್ಯರ್ಥಿ) ಸೋಲಿಸುವ ಮೂಲಕ ಚಿಂತಾಮನ್‌ ಅವರಿಗೆ ಬಿಜೆಪಿ ಗೌರವ ಸಲ್ಲಿಸಿದೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

‘ಅಧಿಕಾರ ಬಳಸಿ ಮತ್ತು ಹಣ ಚೆಲ್ಲಿ  ಬಿಜೆಪಿಯು ಪಾಲ್ಘರ್‌ ಉಪಚುನಾವಣೆಯಲ್ಲಿ ಶಿವಸೇನಾವನ್ನು ಪರಾಭವಗೊಳಿಸಿದೆ. ಅಲ್ಲದೆ, ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡಿರುವುದೂ ಬಿಜೆಪಿ ಗೆಲುವಿಗೆ ಕಾರಣವಾಗಿದೆ’ ಎಂದೂ ರಾವತ್‌ ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry