ಮಗುವಿಗೆ 2 ಹೊತ್ತು ಊಟ ಕೊಟ್ಟರೆ ಸಾಲದು: ಕೋರ್ಟ್‌

7

ಮಗುವಿಗೆ 2 ಹೊತ್ತು ಊಟ ಕೊಟ್ಟರೆ ಸಾಲದು: ಕೋರ್ಟ್‌

Published:
Updated:
ಮಗುವಿಗೆ 2 ಹೊತ್ತು ಊಟ ಕೊಟ್ಟರೆ ಸಾಲದು: ಕೋರ್ಟ್‌

ನವದೆಹಲಿ: ಮಗುವಿಗೆ ತಂದೆಯು ಕೇವಲ ಎರಡು ಹೊತ್ತಿನ ಊಟ ನೀಡಿದರೆ ಅಷ್ಟಕ್ಕೇ ಮುಗಿಯದು. ಮಗು ತನ್ನ ಪೋಷಕರ ಜೊತೆಗಿದ್ದಾಗ ಯಾವ ರೀತಿಯ ಸೌಲಭ್ಯಗಳನ್ನು ಪಡೆಯುತ್ತಿತ್ತು ಎಂಬುದರ ಮೇಲೆ ಏನನ್ನು ನೀಡಬೇಕು ಎಂಬುದು ನಿರ್ಧರಿತವಾಗುತ್ತದೆ ಎಂದು ದೆಹಲಿ ಕೋರ್ಟ್ ಅಭಿಪ್ರಾಯಪಟ್ಟಿದೆ.

ಕೌಟುಂಬಿಕ ಹಿಂಸೆ ಪ್ರಕರಣದಲ್ಲಿ ಮಗುವಿನ ಪೋಷಣೆಗೆ ₹12 ಸಾವಿರ ಹಾಗೂ ಪತ್ನಿಗೆ ₹6 ಸಾವಿರ ನೀಡಬೇಕು ಎಂಬ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ವಜಾಗೊಳಿಸಿತು.

ತನಗೆ ತಿಂಗಳಿಗೆ ₹15,000 ದಿಂದ ₹20,000 ಮಾತ್ರ ಆದಾಯವಿದ್ದು, ತಂದೆಯ ಪಾಲನೆಯನ್ನೂ ಮಾಡಬೇಕಿದೆ ಎಂದು ಅರ್ಜಿದಾರರು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ ಇದನ್ನು ಒಪ್ಪದ ಕೋರ್ಟ್, ವಿಚಾರಣಾ ನ್ಯಾಯಾಲಯವು ಅರ್ಜಿದಾರರ ಆದಾಯವು ₹50,000ಕ್ಕೂ ಹೆಚ್ಚಿದೆ ಎಂದು ಮೌಲ್ಯಮಾಪನ ಮಾಡಿದೆ ಎಂದು ಹೇಳಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry