ತಿದ್ದುಪಡಿಗೆ ಚಿಂತನೆ

7

ತಿದ್ದುಪಡಿಗೆ ಚಿಂತನೆ

Published:
Updated:

ಬರ್ನ್/ನವದೆಹಲಿ: ಅಕ್ರಮ ಹಣದ ಹರಿವು ತಡೆಯುವ ಯತ್ನವಾಗಿ ಸ್ವಿಟ್ಜರ್ಲೆಂಡ್ ಸರ್ಕಾರವು ಅಕ್ರಮ ಹಣ ವರ್ಗಾವಣೆ ಕಾನೂನಿಗೆ ತಿದ್ದುಪಡಿ ತರಲು ನಿರ್ಧರಿಸಿದೆ.

ಬ್ಯಾಂಕಿಂಗ್‌ ರಹಸ್ಯಗಳನ್ನು ಕಾಯ್ದುಕೊಳ್ಳುವ ವ್ಯವಸ್ಥೆಯಿಂದ ಸ್ವಿಟ್ಜರ್ಲೆಂಡ್ ದೇಶ ಹೆಸರಾಗಿದೆ. ಭಾರತ ಸೇರಿದಂತೆ ಜಾಗತಿಕ ರಾಷ್ಟ್ರಗಳ ಒತ್ತಡದ ಪರಿಣಾಮ, ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಕಾನೂನು ತಿದ್ದುಪಡಿಗೆ ಸಮಾಲೋಚನಾ ಪ್ರಕ್ರಿಯೆಗಳನ್ನು ಈಗಾಗಲೇ ಸರ್ಕಾರ ಆರಂಭಿಸಿದೆ. ಹಣ ಎಲ್ಲಿಂದ ಬರುತ್ತದೆ ಎಂದು ಪರಿಶೀಲಿಸುವುದು ಕಡ್ಡಾಯವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry