ಇಂಗ್ಲೆಂಡ್: ವೈದ್ಯರ ವೀಸಾ ನಿಯಮ ಸಡಿಲ ಭರವಸೆ

7

ಇಂಗ್ಲೆಂಡ್: ವೈದ್ಯರ ವೀಸಾ ನಿಯಮ ಸಡಿಲ ಭರವಸೆ

Published:
Updated:
ಇಂಗ್ಲೆಂಡ್: ವೈದ್ಯರ ವೀಸಾ ನಿಯಮ ಸಡಿಲ ಭರವಸೆ

ಲಂಡನ್: ಭಾರತೀಯ ವೈದ್ಯರು ಸೇರಿದಂತೆ ವಿದೇಶದ ವೃತ್ತಿಪರರ ವಲಸೆ ಮೇಲೆ ಇರುವ ನಿರ್ಬಂಧ ತೆಗೆದುಹಾಕುವ ಬಗ್ಗೆ ಪರಿಶೀಲಿಸುವುದಾಗಿ ಬ್ರಿಟನ್‌ನ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಭಾನುವಾರ ತಿಳಿಸಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ (ಎನ್‌ಎಚ್‌ಎಸ್‌) ಇರುವ ವೈದ್ಯರ ಕೊರತೆ ನೀಗಿಸಲು ಬ್ರಿಟನ್‌ ಮುಂದಾಗಿದೆ.

ಐರೋಪ್ಯ ಒಕ್ಕೂಟದ ಹೊರಗಿನ ವೃತ್ತಿಪರರು ಹಾಗೂ ತಂತ್ರಜ್ಞರಿಗೆ ನೀಡುವ ಎರಡನೇ ಶ್ರೇಣಿಯ ವೀಸಾ ಮಿತಿ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

‘ಮಿತಿ ಸಡಿಲಗೊಳಿಸಿ’ ಎಂಬ ಆನ್‌ಲೈನ್ ಅಭಿಯಾನ ಆರಂಭವಾಗಿದ್ದು, ಇದಕ್ಕೆ 1,600 ಮಂದಿ ಸಹಿ ಮಾಡಿದ್ದಾರೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ಆರಂಭಿಸಿರುವ ಈ ಅಭಿಯಾನವನ್ನು ಇಂಡಿಯನ್ ಡಾಕ್ಟರ್ಸ್ ಅಸೋಸಿಯೇಷನ್ ಬೆಂಬಲಿಸಿದೆ.

ಈಗಿನ ವಲಸೆ ನಿಯಮಗಳ ಪ್ರಕಾರ ಕಂಪನಿಗಳು ತಿಂಗಳಿಗೆ 1,600 ವೃತ್ತಿಪರರನ್ನು ಮಾತ್ರ ನೇಮಿಸಿಕೊಳ್ಳಬಹುದು. ಕಳೆದ ವರ್ಷ ಬ್ರಿಟನ್ ಗೃಹ ಸಚಿವಾಲಯವು 1500 ವೈದ್ಯರ ವೀಸಾ ಅರ್ಜಿಗಳನ್ನು ತಿರಸ್ಕರಿಸಿತ್ತು. ವೀಸಾ ನಿಯಮ ಸಡಿಲಿಸುವಂತೆ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಂಸದರಿಂದ ಸರ್ಕಾರದ ಮೇಲೆ ಒತ್ತಡವೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry