ಭಾರತದ ವ್ಯಕ್ತಿಗೆ ಲಾಟರಿಯಲ್ಲಿ ₹ 18 ಕೋಟಿ ಬಹುಮಾನ

7

ಭಾರತದ ವ್ಯಕ್ತಿಗೆ ಲಾಟರಿಯಲ್ಲಿ ₹ 18 ಕೋಟಿ ಬಹುಮಾನ

Published:
Updated:

ದುಬೈ: ಪ್ರತಿಷ್ಠಿತ ‘ಬಿಗ್ ಟಿಕೆಟ್ ಅಬುಧಾಬಿ’ ಎಂಬ ಲಾಟರಿ ಟಿಕೆಟ್ ಖರೀದಿಸಿದ್ದ ಭಾರತ ಮೂಲದ ಡಿಕ್ಸನ್ ಕಟ್ಟಿತಾರಾ ಅಬ್ರಹಾಂ ಎಂಬುವರಿಗೆ ಜಾಕ್‌ಪಾಟ್ ಹೊಡೆದಿದೆ. ಅವರು ₹18 ಕೋಟಿ (10 ಮಿಲಿಯನ್ ದಿರ್ಹಾಮ್ಸ್) ಬಹುಮಾನ ಗೆದ್ದಿದ್ದಾರೆ ಎಂದು ‘ಖಲೀಜಾ ಟೈಮ್ಸ್’ ವರದಿ ಮಾಡಿದೆ. ಇವರು ನೈಜೀರಿಯಾದಲ್ಲಿ ನೆಲೆಸಿದ್ದಾರೆ.

ಅಬುಧಾಬಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಬಹುಮಾನ ಘೋಷಿಸಲಾಯಿತು. ಒಂಬತ್ತು ವಿಜೇತರ ಪೈಕಿ ಐದು ಮಂದಿ ಭಾರತೀಯರು. ಮೂವರು ಪಾಕಿಸ್ತಾನಿಯರು ಹಾಗೂ ಯುಎಇ ದೇಶದ ಒಬ್ಬಾತನಿಗೆ ಬಹುಮಾನ ಸಿಕ್ಕಿದೆ.

ಈ ಲಾಟರಿಯನ್ನು ಅಬುಧಾಬಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಯೋಜಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry