‘ಗೋವು ಶ್ರೇಷ್ಠ ಎನ್ನುವುದು ಕಲ್ಪನೆ ಮಾತ್ರ’

7

‘ಗೋವು ಶ್ರೇಷ್ಠ ಎನ್ನುವುದು ಕಲ್ಪನೆ ಮಾತ್ರ’

Published:
Updated:
‘ಗೋವು ಶ್ರೇಷ್ಠ ಎನ್ನುವುದು ಕಲ್ಪನೆ ಮಾತ್ರ’

ಬೆಂಗಳೂರು: ಗೋವು ಶ್ರೇಷ್ಠ, ಇತರೆ ಪ್ರಾಣಿಗಳು ಕನಿಷ್ಠ ಎನ್ನುವುದು ನಮ್ಮ ಜ್ಞಾನದ ಮಿತಿಯೇ ಹೊರತು, ಜ್ಞಾನದ ವ್ಯಾಪ್ತಿ ಎಂದೂ ಆಗಲಾರದು ಎಂದು ಕನ್ನಡ ಅಭಿವೃದ್ಧಿ ‍ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಿರಿವನ ಕಲ್ಚರಲ್‌ ಅಕಾಡೆಮಿ ಜಂಟಿಯಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೂರು ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜಡವನ್ನು ತಿಂದು ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ ಎನ್ನುವುದು ಇದು ನಿಸರ್ಗ ಸತ್ಯ. ತರಕಾರಿಗೂ ಜೀವವಿರುತ್ತದೆ. ಧರ್ಮದ ಹೆಸರಿನಲ್ಲಿ ಇದನ್ನೇ ತಿನ್ನಬೇಕು ಎಂದು ಬೋಧಿಸುವುದು, ಆಗ್ರಹಿಸುವುದು ನಿಸರ್ಗ ವಿರೋಧಿ ಧೋರಣೆಗಳು. ಪುರಾಣಗಳೆಲ್ಲವೂ ನಾವು ಕಲ್ಪಿಸಿಕೊಂಡಿರುವುದು. ಗೋವು ಶ್ರೇಷ್ಠ ಎನ್ನುವುದು ನಮ್ಮ ಕಲ್ಪನೆಯಷ್ಟೇ. ಅದರ ಆಧಾರದ ಮೇಲೆ ಜೀವಸರಪಳಿಯನ್ನು ವ್ಯತ್ಯಯ ಮಾಡಿದರೆ ಮನುಷ್ಯನಿಗೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿವರಿಸಿದರು.

ಚುನಾವಣೆಯಲ್ಲಿ ಇವಿಎಂ ಬಳಕೆಗೆ ಬಂದ ನಂತರ ಪ್ರಜಾಪ್ರಭುತ್ವದ ಮೇಲಿದ್ದ ನಂಬಿಕೆಯೇ ಕಳೆದುಹೋಗಿದೆ. ಯಂತ್ರವನ್ನು ನಾವು ಭ್ರಷ್ಟಾತೀತವಾದ್ದದ್ದು ಎನ್ನಲು ಸಾಧ್ಯವಿಲ್ಲ. ಅದೂ ಮನುಷ್ಯನ ನಿಯಂತ್ರಣದಲ್ಲಿಯೇ ಇರುವಂತಹದ್ದು. ಇದಲ್ಲದೆ ಯುವ ಮತದಾರರಿಗೆ ಈ ದೇಶದ ಚರಿತ್ರೆ, ಬಹುತ್ವ, ಬಡತನ, ಜಾತಿ ಅವಮಾನಗಳ ಅರಿವಿಲ್ಲ. ಹೀಗಾಗಿ ಹಸಿ ಸುಳ್ಳುಗಳನ್ನು ಸತ್ಯವೆಂದು ನಂಬಿ, ಅದನ್ನೇ ಪ್ರತಿಪಾದಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿರಿವರ ಕಲ್ಚರಲ್‌ ಅಕಾಡೆಮಿಯಿಂದ ರಾಜಶೇಖರ ಮಠಪತಿ ಅವರ ‘ರಕ್ತ ಮತ್ತು ರಾಜಕಾರಣ’, ಕೆ.ಎ.ರಾಮಕೃಷ್ಣ ಮೂರ್ತಿ ಅವರ ‘ಬಂಧು ಮಿತ್ರರು’, ಎಸ್‌.ಮಂಜುನಾಥ್‌ ಅವರ ‘ಏಳು ತಂತಿ ಏಕನಾದ’ ಕೃತಿಗಳು ಬಿಡುಗಡೆಯಾದವು. ಮೂರು ಪುಸ್ತಕಗಳ ಒಟ್ಟು ಮುಖಬೆಲೆ ₹580.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry