ಪೊಲೀಸ್‌ ಮೇಲೆ ನಾಯಿ ಛೂ ಬಿಟ್ಟ ಮಹಿಳೆ

7

ಪೊಲೀಸ್‌ ಮೇಲೆ ನಾಯಿ ಛೂ ಬಿಟ್ಟ ಮಹಿಳೆ

Published:
Updated:

ಬೆಂಗಳೂರು: ಹತ್ತಕ್ಕೂ ಹೆಚ್ಚು ಗೋಲ್ಡನ್ ರಿಟ್ರೈವರ್ ನಾಯಿಗಳು ದಾಳಿ ನಡೆಸಿದ್ದರಿಂದ ಪೊಲೀಸ್‌ ಅಧಿಕಾರಿಯೊಬ್ಬರು ಗಾಯಗೊಂಡ ಪ್ರಕರಣ ಯಲಹಂಕದ ರಯಾನ್‌ ಇಂಟರ್‌ನ್ಯಾಷನಲ್‌ ಶಾಲೆಯ ಬಳಿ ಇರುವ ಮೈದಾನದಲ್ಲಿ ನಡೆದಿದೆ.

ಇದೇ 1ರಂದು ಬೆಳಿಗ್ಗೆ 7ರ ಸುಮಾರಿಗೆ ವಾಯುವಿಹಾರಕ್ಕೆ ಮೈದಾನಕ್ಕೆ ತೆರಳಿದ್ದ ಪೊಲೀಸ್ ಅಧಿಕಾರಿ ಮನೆಗೆ ಮರಳುವಾಗ ಈ ದುರ್ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿ ಮನೆಗೆ ಮರಳುವ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಗೋಲ್ಡನ್‌ ರಿಟ್ರೈವರ್‌ ನಾಯಿಗಳೊಂದಿಗೆ ಮಹಿಳೆಯೊಬ್ಬಳು ಕಾರಿನಲ್ಲಿ ಮೈದಾನಕ್ಕೆ ಬಂದ್ದಿದ್ದಾಳೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ನಾಯಿಗಳನ್ನು ವಿಹರಿಸಲು ಬಿಟ್ಟಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಅವರು ಮಹಿಳೆಯನ್ನು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ.

ಈ ಸಂದರ್ಭದಲ್ಲಿ ಮಹಿಳೆ ಸನ್ನೆ ಮಾಡಿ ನಾಯಿಗಳನ್ನು ಅಧಿಕಾರಿಯ ಮೇಲೆ ಛೂಬಿಟ್ಟಿದ್ದಾಳೆ. ಅವುಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅಧಿಕಾರಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬಗ್ಗೆ ಯಲಹಂಕ  ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry