ಹೊಳಲ್ಕೆರೆ ಬಳಿ ಭೀಕರ ಅಪಘಾತದಲ್ಲಿ ಇಬ್ಬರು ಸಾವು; ಹರಿಹರ ಸಮೀಪ ಬಸ್‌ ಪಲ್ಟಿಯಾಗಿ 15 ಮಂದಿ ಗಾಯ

7

ಹೊಳಲ್ಕೆರೆ ಬಳಿ ಭೀಕರ ಅಪಘಾತದಲ್ಲಿ ಇಬ್ಬರು ಸಾವು; ಹರಿಹರ ಸಮೀಪ ಬಸ್‌ ಪಲ್ಟಿಯಾಗಿ 15 ಮಂದಿ ಗಾಯ

Published:
Updated:
ಹೊಳಲ್ಕೆರೆ ಬಳಿ ಭೀಕರ ಅಪಘಾತದಲ್ಲಿ ಇಬ್ಬರು ಸಾವು; ಹರಿಹರ ಸಮೀಪ ಬಸ್‌ ಪಲ್ಟಿಯಾಗಿ 15 ಮಂದಿ ಗಾಯ

ಹೊಳಲ್ಕೆರೆ: ಪಟ್ಟಣದ ಹೊರವಲಯದ ಹೊಸದುರ್ಗ ರಸ್ತೆಯಲ್ಲಿ ಸೋಮವಾರ ಕಾರು ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಸರೋಜಮ್ಮ (70), ಸುನಂದಾ (40) ಮೃತಪಟ್ಟ ದುರ್ದೈವಿಗಳು.

ಮೃತರು ತಾಲ್ಲೂಕಿನ ಅರೆಹಳ್ಳಿ ನಿವಾಸಿಗಳಾಗಿದ್ದು, ವಿರಾಜ ಪೇಟೆಯಲ್ಲಿ ನೆಲೆಸಿದ್ದಾರೆ. ಅರೆಹಳ್ಳಿಯಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ವಿರಾಜಪೇಟೆಯಿಂದ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಸರೋಜಮ್ಮ ಅವರ ಮಗ ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ ಪಲ್ಟಿ: 15 ಮಂದಿಗೆ ಗಾಯ

ದಾವಣಗೆರೆ:
ಜಿಲ್ಲೆಯ ಹರಿಹರ ತಾಲ್ಲೂಕು ಮೂಗಿನಗೊಂದಿ ಬಳಿ ಖಾಸಗಿ ಬಸ್ ಉರುಳಿ ಬಿದ್ದು 15 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಮಲೇಬೆನ್ನೂರು, ಕೊಕ್ಕನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಜೀವಹಾನಿ ಆಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry