ಪರೋಪಕಾರಕ್ಕೆ ಜೀವನ ಮುಡಿಪಿಟ್ಟ ಮಲ್ಲಮ್ಮ

7

ಪರೋಪಕಾರಕ್ಕೆ ಜೀವನ ಮುಡಿಪಿಟ್ಟ ಮಲ್ಲಮ್ಮ

Published:
Updated:

ಶಿವಮೊಗ್ಗ: ಹೇಮರಡ್ಡಿ ಮಲ್ಲಮ್ಮ ತನ್ನ ಜೀವನವನ್ನು ಪರೋಪಕಾರಕ್ಕಾಗಿ ಮುಡಿಪಾಗಿಟ್ಟಂತಹ ಮಹಾಸಾದ್ವಿ ಎಂದು ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹಾಲಮ್ಮ ಹೇಳಿದರು.

ಬಸವಕೇಂದ್ರದಲ್ಲಿ ಭಾನುವಾರ ರಡ್ಡಿ ಸಮಾಜ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಲ್ಲಮ್ಮ ಶಿವನ ಪರಮ ಭಕ್ತೆಯಾಗಿದ್ದು, ಅಧ್ಯಾತ್ಮದ ಜ್ಞಾನದ ಮೂಲಕ ಪವಾಡಗಳನ್ನು ಮಾಡುತ್ತಿದ್ದಳು. ಯಾವುದೇ ಕಾಯಕ ನೀಡಿದರೂ ನಿಷ್ಠೆಯಿಂದ ಮಾಡುತ್ತಿದ್ದಳು. ಅದರಲ್ಲೇ ಶಿವನನ್ನು ಕಾಣುತ್ತಿದ್ದಳು. ಆದರೆ, ಇಂದು ಅಧ್ಯಾತ್ಮ ಜ್ಞಾನದ ಕೊರತೆ, ಕಾಯಕದ ಬಗ್ಗೆ ತಾತ್ಸಾರ ಮನೋಭಾವವನ್ನು ನಾವು ಕಾಣಬಹುದು. ಕೆಲಸವನ್ನು ಒಳ್ಳೆಯ ಕೆಲಸ, ಕನಿಷ್ಠ ಕೆಲಸ ಎಂದು ವಿಂಗಡಿಸಿ ಅವುಗಳನ್ನು ಆಯ್ಕೆ ಮಾಡಿಕೊಳ್ಳುವ ಮನೋಭಾವ ಇಂದಿನ ಪೀಳಿಗೆಯಲ್ಲಿದ್ದು, ಅಂದಿನ ಕಾಯಕ ನಿಷ್ಠೆಯನ್ನು ಇಂದು ಕಾಣಲು ಸಾಧ್ಯವಿಲ್ಲ’ ಎಂದರು.

‘ಹಿಂದೆ ಮಹಿಳೆಯರ ಅಭಿಪ್ರಾಯಗಳನ್ನು ಹೇಳಲು ಯಾವುದೇ ವೇದಿಕೆಗಳು ಇರಲಿಲ್ಲ, ಬದಲಾದ ಕಾಲಮಾನದಲ್ಲಿ ಕೆಲವು ಮಹಿಳೆಯರು ವಚನಗಳನ್ನು ಹೇಳುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದರು. ಮನಸ್ಸಿನಲ್ಲೇ ಶಿವನೊಂದಿಗೆ ಮಾತನಾಡುತ್ತಿದ್ದರು. ಮಲ್ಲಮ್ಮನ ಕಾಲಾ ನಂತರ ಶರಣರು ಮಹಿಳೆಯರಿಗೂ ಆದ್ಯತೆ ನೀಡಿ ಅವರ ಅಭಿಪ್ರಾಯ ಹೇಳಲು ಮುಕ್ತ ಅವಕಾಶ ಕಲ್ಪಿಸುತ್ತಿದ್ದರು’ ಎಂದರು.

ಮಲ್ಲಮನ ಜೀವನ ಚರಿತ್ರೆಯನ್ನು ಓದುವ ಮೂಲಕ ಅವಳ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಕೊಳ್ಳ

ಬೇಕು ಎಂದು ಸಲಹೆ ನೀಡಿದರು.

ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವಕೇಂದ್ರ ಅಧ್ಯಕ್ಷ ಬೆನಕಪ್ಪ, ರುದ್ರಮುನಿ ಸಜ್ಜನ್, ಡಾ. ಶಿವಲಿಂಗಪ್ಪ, ಎಚ್.ಸಿ. ರೇವಣ್ಣ, ಸಿದ್ದಪ್ಪ, ಡಾ. ಕೊಟ್ರೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry