ಕಾಶ್ಮೀರದ ಶೋಪಿಯಾನ್‍ನಲ್ಲಿ ಗ್ರೆನೇಡ್ ದಾಳಿ: 16 ಮಂದಿಗೆ ಗಾಯ

7

ಕಾಶ್ಮೀರದ ಶೋಪಿಯಾನ್‍ನಲ್ಲಿ ಗ್ರೆನೇಡ್ ದಾಳಿ: 16 ಮಂದಿಗೆ ಗಾಯ

Published:
Updated:
ಕಾಶ್ಮೀರದ ಶೋಪಿಯಾನ್‍ನಲ್ಲಿ ಗ್ರೆನೇಡ್ ದಾಳಿ: 16 ಮಂದಿಗೆ ಗಾಯ

ಶೋಪಿಯಾನ್: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಗ್ರೆನೇಡ್ ದಾಳಿ ನಡೆದಿದ್ದು 16 ಮಂದಿಗೆ ಗಾಯಗಳಾಗಿವೆ.  ಗಾಯಗೊಂಡವರಲ್ಲಿ 14 ಮಂದಿ ನಾಗರಿಕರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳಾಗಿದ್ದಾರೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ಕಳೆದ ನಾಲ್ಕು ದಿನಗಳಲ್ಲಿ ಕಾಶ್ಮೀರದಲ್ಲಿ ನಡೆದ 10ನೇ ದಾಳಿ ಇದಾಗಿದೆ. ಈ ದಾಳಿಯ ಹೊಣೆಯನ್ನು ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆ ವಹಿಸಿಕೊಂಡಿದೆ.

ಪೊಲೀಸರ ಪ್ರಕಾರ ಶೋಪಿಯಾನ್ ನಗರದ ಬಟಪೊರಾ ಚೌಕ್‍ನಲ್ಲಿ ಪೊಲೀಸರ ಚೌಕಿ ಮೇಲೆ ಉಗ್ರರು ಗ್ರೆನೇಡ್ ಎಸೆದಿದ್ದರು. ಆದರೆ ಅದು ಗುರಿ ತಪ್ಪಿ ರಸ್ತೆಯಲ್ಲಿ ಸ್ಫೋಟಗೊಂಡಿತ್ತು.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry