ಧ್ಯಾನದಿಂದ ಸ್ಮರಣಶಕ್ತಿ ವೃದ್ಧಿ: ಪ್ರತಿಮಾ

7
ಬೀದರ್‌: ವಿಶ್ವ ಯೋಗ ದಿನಾಚರಣೆ ನಿಮಿತ್ತ ಕಾರ್ಯಕ್ರಮ

ಧ್ಯಾನದಿಂದ ಸ್ಮರಣಶಕ್ತಿ ವೃದ್ಧಿ: ಪ್ರತಿಮಾ

Published:
Updated:

ಬೀದರ್: ‘ಪ್ರತಿನಿತ್ಯ ಧ್ಯಾನ ಮಾಡುವುದರಿಂದ ಏಕಾಗ್ರತೆ ಹಾಗೂ ಸ್ಮರಣಶಕ್ತಿ ವೃದ್ಧಿಯಾಗುತ್ತದೆ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್ ತಿಳಿಸಿದರು.

ಬ್ರಹ್ಮಕುಮಾರಿ ಕೇಂದ್ರದ ಪಾವನಧಾಮ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಧ್ಯಾನ ಮಾಡಿದರೆ ಮಾತ್ರ ತಾವು ಓದಿರುವ ವಿಷಯಗಳು ಸದಾ ನೆನಪಿನಲ್ಲಿ ಇರುತ್ತವೆ. ಇದರಿಂದ ಪ್ರತಿದಿನ ಧ್ಯಾನ ಮಾಡುವ ರೂಢಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಯೋಗ ಅನಿವಾರ್ಯ. ಯೋಗವು ಮನುಷ್ಯನಲ್ಲಿ ಸಾತ್ವಿಕ ಶಕ್ತಿ ತುಂಬುತ್ತದೆ. ಪ್ರಾಣಾಯಾಮ ನಿರೋಗಿಯಾಗಿಸುತ್ತದೆ’ ಎಂದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಶಾರದಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಭಾರತ ವಿಶ್ವಕ್ಕೆ ಯೋಗ ಕಲಿಸುವ ಮೂಲಕ ಗುರುವಾಗಿ ಗಮನ ಸೆಳೆದಿರುವುದು ಹೆಮ್ಮೆಯ ಸಂಗತಿ’ ಎಂದು ತಿಳಿಸಿದರು.

ಇದೇ 20 ರಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಆಯುಷ್‌ ಇಲಾಖೆ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಯೋಗ ಶಿಕ್ಷಕ ಧೋಂಡಿರಾಮ ಚಾಂದಿವಾಲೆ ವಿವಿಧ ಬಗೆಯ ಯೋಗಾಸನ ಪ್ರದರ್ಶಿಸಿದರು. ಬ್ರಹ್ಮಕುಮಾರಿ ಪಾವನಧಾಮದ ಪ್ರವರ್ತಕ ಬಿ.ಕೆ ಪ್ರಭಾಕರ ಕೋರವಾರ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ ಜ್ಯೋತಿ ಬಹೆನ್ ಧ್ಯಾನ ಮಾಡಿಸಿದರು. ಬಿ.ಕೆ ವಾಣಿ ಬಹೆನ್ ಸ್ವಾಗತಿಸಿದರು. ಬಿ.ಕೆ ಮೀನಾ ಬಹೆನ್ ನಿರೂಪಿಸಿದರು. ಬಿ.ಕೆ ಮಂಗಲಾ ಬಹೆನ್ ವಂದಿಸಿದರು. ಬಳಿಕ ಭಜನೆ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry