ಫ್ರೆಂಚ್‌ ಓಪನ್‌ ಟೂರ್ನಿ: ಹೊರ ನಡೆದ ಸೆರೆನಾ ವಿಲಿಯಮ್ಸ್‌

2
ಸ್ನಾಯು ನೋವಿನ ಸಮಸ್ಯೆ

ಫ್ರೆಂಚ್‌ ಓಪನ್‌ ಟೂರ್ನಿ: ಹೊರ ನಡೆದ ಸೆರೆನಾ ವಿಲಿಯಮ್ಸ್‌

Published:
Updated:
ಫ್ರೆಂಚ್‌ ಓಪನ್‌ ಟೂರ್ನಿ: ಹೊರ ನಡೆದ ಸೆರೆನಾ ವಿಲಿಯಮ್ಸ್‌

ಪ್ಯಾರಿಸ್‌: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅಮೆರಿಕದ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ.

ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದ ಸೆರೆನಾ(36) ರಷ್ಯಾದ ಆಟಗಾರ್ತಿ ಮರಿಯಾ ಶರಪೋವಾ ವಿರುದ್ಧ ಸೆಣಸಲಿದ್ದರು. ಆದರೆ, ಎದೆ ಭಾಗದ ಸ್ನಾಯು ಸೆಳೆತದಿಂದಾಗಿ ಟೂರ್ನಿಯಿಂದ ಸೋಮವಾರ ನಿರ್ಗಮಿಸುವ ನಿರ್ಧಾರ ಪ್ರಕಟಿಸಿದ್ದಾರೆ.

23 ಬಾರಿ ಗ್ರ್ಯಾಂಡ್‌ ಸ್ಲಾಮ್‌ ಚಾಂಪಿಯನ್‌ ಆಗಿರುವ ಅವರು ಹೆರಿಗೆ ರಜೆ ಮುಗಿಸಿ ಫ್ರೆಂಚ್‌ ಓಪನ್‌ಗಾಗಿ ಸಾಕಷ್ಟು ಶ್ರಮ ವಹಿಸಿದ್ದರು.

ಭಾನುವಾರ ನಡೆದಿದ್ದ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್ ಮತ್ತು ವೀನಸ್‌ ವಿಲಿಯಮ್ಸ್‌ ಸೋಲು ಅನುಭವಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry