ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತರ ಓಲೈಕೆ?

7

ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತರ ಓಲೈಕೆ?

Published:
Updated:
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತರ ಓಲೈಕೆ?

ಲಖನೌ: ರಮ್ಜಾನ್‌ ತಿಂಗಳಲ್ಲಿ ಇಂಡೊನೇಷ್ಯಾ ಹಾಗೂ ಮಲೇಷ್ಯಾ ಪ್ರವಾಸ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆಯೇ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.

ತಮ್ಮ ಪಕ್ಷ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಆರೋಪಿಸುವ ಬಿಜೆಪಿಯನ್ನು ಅಖಿಲೇಶ್ ತರಾಟೆಗೆ ತೆಗೆದುಕೊಂಡರು.

‘ಯೋಗಿ ಆದಿತ್ಯನಾಥ ಅವರು ಹಿಂದೂ ಆಗಿರುವ ಕಾರಣ ಈದ್ ಹಬ್ಬ ಆಚರಿಸುವುದಿಲ್ಲ ಎಂದು ಹೇಳುತ್ತಾರೆ.  ಬಿಜೆಪಿಯು ನಮ್ಮನ್ನು ಅಲ್ಪಸಂಖ್ಯಾತರ ಓಲೈಕೆ ಪಕ್ಷ ಎಂದು ಆರೋಪಿಸುತ್ತದೆ. ಆದರೆ ಮೋದಿ ಅವರು ರಮ್ಜಾನ್‌ ವೇಳೆ ಇಂಡೊನೇಷ್ಯಾ ಹಾಗೂ ಮಲೇಷ್ಯಾ ಪ್ರವಾಸ ಮಾಡಿದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಮರನ್ನು ಓಲೈಸುವ ಯತ್ನವಲ್ಲವೇ ಎಂದು ಅಖಿಲೇಶ್ ಅವರು ಪ್ರಶ್ನಿಸಿದ್ದಾರೆ.

ಇಂಡೊನೇಷ್ಯಾವು ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶ. ಮೋದಿ ಅವರು ಆಗ್ನೇಯ ಏಷ್ಯಾದ ಅತಿದೊಡ್ಡ ಇಸ್ತಿಕ್‌ಲಾಲ್ ಮಸೀದಿಗೆ ಇತ್ತೀಚೆಗೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry