ಮಠಾಧಿಪತಿಗಳಿಗೆ ರಾಜಕೀಯ ಬೇಡ: ಸುಭಾಷ್‌ಚಂದ್ರ

7

ಮಠಾಧಿಪತಿಗಳಿಗೆ ರಾಜಕೀಯ ಬೇಡ: ಸುಭಾಷ್‌ಚಂದ್ರ

Published:
Updated:

ಬೆಂಗಳೂರು: ‘ಹಲವು ಮಠಾಧಿಪತಿಗಳು ರಾಜಕೀಯ ನಾಯಕರೊಬ್ಬರ ಮನೆಗೆ ಗುಂಪಾಗಿ ತೆರಳಿ ಸಮುದಾಯದ ಮುಖಂಡರೊಬ್ಬರಿಗೆ ಮಂತ್ರಿಗಿರಿ ಕೊಡಿ ಎಂದು ಅಂಗಲಾಚಿ ಬೇಡಿದ್ದು ಸರಿಯಲ್ಲ. ಅದು ಅವರ ಘನತೆಗೆ ತಕ್ಕದ್ದಲ್ಲ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಟಿ ಸುಭಾಷ್‌ಚಂದ್ರ ಟೀಕಿಸಿದ್ದಾರೆ.

‘ವೀರಶೈವ ಮಠಾಧಿಪತಿಗಳು ರಾಜಕೀಯ ಚಟುವಟಿಕೆಗಳನ್ನು ಆರಂಭಿಸಿರುವುದು ಖೇದಕರ ಸಂಗತಿ. ಚುನಾವಣೆಯಲ್ಲಿ ಟಿಕೆಟ್‌ ಕೊಡಿಸುವ ಏಜೆಂಟರಂತೆ ಅವರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸಮುದಾಯದವರಿಗೆ ಮತ ನೀಡಿ ಎಂದು ಗುಪ್ತ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ರಾಜಕೀಯ ನಾಯಕರೊಬ್ಬರನ್ನು ಭೇಟಿ ಮಾಡಿದ ಪ್ರಕರಣ ಗಮನಿಸಿದರೆ ಅವರು ಪೀಠತ್ಯಾಗ ಮಾಡಿ ಕಾವಿ ಕಳಚಿ ನೇರವಾಗಿ ರಾಜಕೀಯಕ್ಕೆ ಧುಮುಕುವುದು ಉತ್ತಮ’ ಎಂದು ಹೇಳಿದರು.

‘ಮಠಾಧಿಪತಿಗಳು ಹೀಗೆಯೇ ಕೆಳಮಟ್ಟಕ್ಕಿಳಿದು ನಡೆದುಕೊಂಡರೆ ಶರಣಸಮೂಹ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry