ಆರ್‌ಟಿಇ: 19 ಸಾವಿರ ಸೀಟು ಹಂಚಿಕೆ

7

ಆರ್‌ಟಿಇ: 19 ಸಾವಿರ ಸೀಟು ಹಂಚಿಕೆ

Published:
Updated:

ಬೆಂಗಳೂರು: ‘ಶಿಕ್ಷಣ ಹಕ್ಕು ಕಾಯ್ದೆ’ಯಡಿ (ಆರ್‌ಟಿಇ) ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ 46,279 ಸೀಟುಗಳಿಗೆ ಶನಿವಾರ ಮೂರನೇ ಸುತ್ತಿನ ಲಾಟರಿ ಪ್ರಕ್ರಿಯೆ ನಡೆಸಲಾಯಿತು.

1,08,794 ಅರ್ಜಿಗಳನ್ನು ಲಾಟರಿ ಪ್ರಕ್ರಿಯೆಗೆ ಪರಿಗಣಿಸಲಾಗಿತ್ತು. ಈ ಪೈಕಿ 19,123 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಜೂನ್‌ 8ರೊಳಗಾಗಿ ಶಾಲೆಗಳಲ್ಲಿ ದಾಖಲಾತಿ ಪಡೆಯಬೇಕು.

ಅನುದಾನಿತ ಮತ್ತು ಅನುದಾನ ರಹಿತ ಒಟ್ಟು 14,107 ಶಾಲೆಗಳಲ್ಲಿ 1,52,1117 ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 2,38,724 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಏಪ್ರಿಲ್‌ 20 ರಂದು ನಡೆದ ಮೊದಲ ಸುತ್ತಿನ ಲಾಟರಿಯಲ್ಲಿ 1,11,548 ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು.  40,569 ಸೀಟುಗಳಿಗೆ ಪೋಷಕರು ಆದ್ಯತೆ ನೀಡದ ಕಾರಣ ಹಂಚಿಕೆ ಮಾಡಿಲ್ಲ.

ಮೊದಲ ಸುತ್ತಿನಲ್ಲಿ 97,768 ವಿದ್ಯಾರ್ಥಿಗಳು ದಾಖಲಾಗಿದ್ದರು. ಹಂಚಿಕೆಯಾದ ಶಾಲೆಗಳಿಗೆ ಪೋಷಕರು ಆಸಕ್ತಿ ತೋರದೆ ಇರುವುದರಿಂದ 13,780 ಸೀಟುಗಳಿಗೆ ದಾಖಲಾತಿಯಾಗಿಲ್ಲ.

ಏಪ್ರಿಲ್‌ 24 ರಂದು ನಡೆದ ಎರಡನೇ ಸುತ್ತಿನ ಲಾಟರಿಯಲ್ಲಿ 12,954 ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry