ಶಿಕ್ಷಕರಿಗೆ ನಿವೇಶನ ವಂಚನೆ ಮಾಡಿಲ್ಲ: ರಾಮೋಜಿ ಗೌಡ

7

ಶಿಕ್ಷಕರಿಗೆ ನಿವೇಶನ ವಂಚನೆ ಮಾಡಿಲ್ಲ: ರಾಮೋಜಿ ಗೌಡ

Published:
Updated:

ಮಾಗಡಿ: ‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿ ಅ.ದೇವೇಗೌಡ ಸೋಲುವ ಭೀತಿಯಿಂದ ಸ್ವಯಂ ನಿವೃತ್ತಿ ಪಡೆದಿರುವ ಅಧಿಕಾರಿ ಎಂ.ನೀಲಯ್ಯ ಅವರ ಮೂಲಕ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿಸುತ್ತಿದ್ಧಾರೆ’ ಎಂದು ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡ ತಿಳಿಸಿದ್ಧಾರೆ.

ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಶಿಕ್ಷಕರಿಗೆ ನಿವೇಶನ ನೀಡದೆ ವಂಚನೆ ಮಾಡಿರುವುದನ್ನು ಸಾಬೀತು ಪಡಿಸಿದರೆ , ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ’ ಎಂದು ತಿಳಿಸಿದ ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡ, ಸರ್ಕಾರಿ ಅಧಿಕಾರಿಯಾಗಿದ್ದ ಎಂ.ನೀಲಯ್ಯ ಭಾರಿ ಭ್ರಷ್ಟಾಚಾರ ಮಾಡಿ ಸಿಕ್ಕಿ ಹಾಕಿಕೊಳ್ಳುವ ಭಯದಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ’ ಎಂದು ದೂರಿದರು.

‘ನನಗೆ ಅಧಿಕ ಮತ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಕೆಂಚೇಗೌಡ ಮಾತನಾಡಿ, ‘ರಾಮೋಜಿ ಗೌಡರ ಮೇಲೆ ಮತದಾರರ ಒಲವು ಇರುವುದರಿಂದ ಹತಾಶೆಯಿಂದ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಗೆಲುವು ನಮ್ಮದೇ’ ಎಂದು ತಿಳಿಸಿದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಕೆಂಪೇಗೌಡ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್‌.ಲೋಕೇಶ್‌, ಶಿಕ್ಷಕರಾದ ನರಸಿಂಹ ಮೂರ್ತಿ, ಚಿಕ್ಕವೀರಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry