ಕಟ್ಟಡದಿಂದ ಬಿದ್ದು ಸಾವು

7

ಕಟ್ಟಡದಿಂದ ಬಿದ್ದು ಸಾವು

Published:
Updated:

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್‌ನ 3ನೇ ಹಂತದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಬಿದ್ದು ಗೋಪಾಲ್ (32) ಎಂಬುವರು ಮೃತಪಟ್ಟಿದ್ದಾರೆ.

ನೇಪಾಳದವರಾದ ಗೋಪಾಲ್‌ ಕೆಲಸ ಹುಡುಕಿಕೊಂಡು ಎರಡು ವರ್ಷಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. 11ನೇ ಅಡ್ಡ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದರು ಎಂದು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಹೇಳಿದರು.

ಮೃತರ ಸ್ನೇಹಿತ ಭರತ್‌, 22ನೇ ಅಡ್ಡ ರಸ್ತೆಯಲ್ಲಿರುವ ಇನ್ನೊಂದು ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಜತೆ ಊಟ ಮಾಡಲೆಂದು ಗೋಪಾಲ್ ಅಲ್ಲಿಗೆ ಹೋಗಿದ್ದರು. ಬಳಿಕ ಗೋಪಾಲ್ ಅಲ್ಲಿಯೇ ಮಲಗಿದ್ದರು. ಭರತ್ ತಮ್ಮ ಶೆಡ್‌ಗೆ ಹೋಗಿ ಮಲಗಿದ್ದರು.

ತಡರಾತ್ರಿ ಮೂತ್ರ ವಿಸರ್ಜನೆಗೆಂದು ಎಚ್ಚರಗೊಂಡಿದ್ದ ಗೋಪಾಲ್, ನಿದ್ದೆಯ ಮಂಪರಿನಲ್ಲಿ ಲಿಫ್ಟ್‌ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry