ಮಕ್ಕಳ ಕಳ್ಳರ ವದಂತಿ: ಜನಜಾಗೃತಿಗೆ ಯಶ್‌ ಸಾಥ್‌

7

ಮಕ್ಕಳ ಕಳ್ಳರ ವದಂತಿ: ಜನಜಾಗೃತಿಗೆ ಯಶ್‌ ಸಾಥ್‌

Published:
Updated:
ಮಕ್ಕಳ ಕಳ್ಳರ ವದಂತಿ: ಜನಜಾಗೃತಿಗೆ ಯಶ್‌ ಸಾಥ್‌

ಬೆಂಗಳೂರು: ಮಕ್ಕಳ ಕಳ್ಳರ ಬಗ್ಗೆ ಹಬ್ಬಿರುವ ವದಂತಿಯ ಬಗ್ಗೆ ನಗರದ ಪೊಲೀಸರು ಕೈಗೊಂಡಿರುವ ಜನಜಾಗೃತಿ ಆಂದೋಲನಕ್ಕೆ ನಟ ಯಶ್‌ ಕೈಜೋಡಿಸಿದ್ದಾರೆ.

‘ನಗರದಲ್ಲಿ ಮಕ್ಕಳ ಕಳ್ಳರ ಗುಂಪು ಇದ್ದು, ಮಕ್ಕಳನ್ನು ಅಪಹರಿಸುತ್ತಿದೆ ಎಂಬುದು ಒಂದು ಸುಳ್ಳು ಸುದ್ದಿಯಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯಿಂದ ಆತಂಕಗೊಳ್ಳುವ ಅಗತ್ಯವಿಲ್ಲ’

‘ಯಾವುದೇ ರೀತಿಯ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್‌ ಠಾಣೆ ಅಥವಾ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿ’ ಎಂದು ಬರೆದಿರುವ ಜನಜಾಗೃತಿಯ ಕರಪತ್ರಗಳನ್ನು ಯಶ್‌ ಪ್ರದರ್ಶಿಸುತ್ತಿರುವ ಚಿತ್ರಗಳನ್ನು ಪೊಲೀಸ್‌ ಇಲಾಖೆ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದೆ.

ಈ ಚಿತ್ರವನ್ನು ಹಲವರು ಶೇರ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಶ್‌ ಕಾರ್ಯಕ್ಕೆ ಪಶ್ಚಿಮ ವಲಯದ ಡಿಜಿಪಿ ರವಿ ಚೆನ್ನಣ್ಣನವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry