ದುನಿಯಾ ವಿಜಯ್‌ ಬಂಧನಕ್ಕೆ ವಿಶೇಷ ತಂಡ

7
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ

ದುನಿಯಾ ವಿಜಯ್‌ ಬಂಧನಕ್ಕೆ ವಿಶೇಷ ತಂಡ

Published:
Updated:
ದುನಿಯಾ ವಿಜಯ್‌ ಬಂಧನಕ್ಕೆ ವಿಶೇಷ ತಂಡ

ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ನಟ ದುನಿಯಾ ವಿಜಯ್ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ.

2016ರ ನವೆಂಬರ್ 7ರಂದು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ‘ಮಾಸ್ತಿಗುಡಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕಲಾವಿದರಾದ ಅನಿಲ್ ಹಾಗೂ ರಾಘವ್ ಉದಯ್ ಮೃತಪಟ್ಟಿದ್ದರು. ಆ ಪ್ರಕರಣದ ವಿಚಾರಣೆಗೆ ಗೈರಾಗುತ್ತಿದ್ದ ಆರೋಪಿಯಾದ ನಿರ್ಮಾಪಕ ಪಿ.ಸುಂದರ್‌ ಗೌಡನನ್ನು ಬಂಧಿಸಲು ರಾಮನಗರ ನ್ಯಾಯಾಲಯ ವಾರಂಟ್‌ ಹೊರಡಿಸಿತ್ತು ಎಂದು ಪೊಲೀಸರು ತಿಳಿಸಿದರು.

ತಾವರಕೆರೆ ಪೊಲೀಸರು, ವಾರಂಟ್ ಸಮೇತ ಚನ್ನಮ್ಮನ ಕೆರೆ ಅಚ್ಚುಕಟ್ಟುವಿನಲ್ಲಿರುವ ಸುಂದರ್‌ಗೌಡ ಮನೆಗೆ ಮೇ 27ರಂದು ಹೋಗಿದ್ದರು. ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲು ಮುಂದಾಗಿದ್ದರು. ಅದೇ ವೇಳೆ ಮನೆಗೆ ಹೋಗಿದ್ದ ವಿಜಯ್, ಪೊಲೀಸರನ್ನು ಹೊರಗೆ ಕರೆದುಕೊಂಡು ಬಂದಿದ್ದರು. ಅವಾಗಲೇ ಮನೆಯ ಹಿಂದಿನ ಬಾಗಿಲಿನಿಂದ ಸುಂದರ್‌ಗೌಡ ತಪ್ಪಿಸಿಕೊಂಡು ಹೋಗಿದ್ದರು.

ಘಟನೆ ಸಂಬಂಧ ತಾವರಕೆರೆ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ ಗೋವಿಂದರಾಜು ದೂರು ನೀಡಿದ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ (ಐಪಿಸಿ 353) ಹಾಗೂ ಬಂಧನದಲ್ಲಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಸಹಕಾರ (ಐಪಿಸಿ 225) ಆರೋಪದಡಿ ವಿಜಯ್ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

‘ಘಟನೆ ದಿನವೇ ಬೆಂಗಳೂರು ತೊರೆದಿರುವ ವಿಜಯ್, ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ. ಅವರು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ಮಾತ್ರ ಸ್ಪಷ್ಟವಾಗಿದೆ. ಆದಷ್ಟು ಬೇಗ ಪತ್ತೆ ಹಚ್ಚಲಿದ್ದೇವೆ’ ಎಂದು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry