ಕಲುಷಿತಗೊಳ್ಳುತ್ತಿದೆ ಹೆಸರಘಟ್ಟ ಕೆರೆ

7

ಕಲುಷಿತಗೊಳ್ಳುತ್ತಿದೆ ಹೆಸರಘಟ್ಟ ಕೆರೆ

Published:
Updated:
ಕಲುಷಿತಗೊಳ್ಳುತ್ತಿದೆ ಹೆಸರಘಟ್ಟ ಕೆರೆ

ಬೆಂಗಳೂರು: ಹೆಸರಘಟ್ಟ ಕೆರೆಯಲ್ಲಿ ‘ಕತ್ತೆ ಕಿವಿ’ (ಅಂತರಗಂಗೆ) ಗಿಡಗಳು ಬೆಳೆಯುತ್ತಿದ್ದು ಕೆರೆಯ ನೀರು ಕುಲಷಿತಗೊಳ್ಳುತ್ತಿದೆ.

‘ಕಳೆದ ವರ್ಷ ಉತ್ತಮ ಮಳೆಯಾದ ಕಾರಣ ಹೆಸರಘಟ್ಟ ಕೆರೆಗೆ ಸುಮಾರು ಹದಿನಾಲ್ಕು ಅಡಿಯಷ್ಟು ನೀರು ಬಂತು. ಸುತ್ತಮುತ್ತಲಿನ ಕೊಳೆವೆ ಬಾವಿಗಳ ಅಂತರ್ಜಲಮಟ್ಟ ಹೆಚ್ಚಿ ರೈತರು ಬೆಳೆ ಬೆಳೆಯಲು ಹೆಚ್ಚಿನ ಅನುಕೂಲವಾಯಿತು. ಆದರೆ, ಹೆಸರಘಟ್ಟ ಕೆರೆಯ ನೀರು ನಿಂತಲ್ಲೇ ನಿಂತ ಪರಿಣಾಮ ಕೆರೆಯಲ್ಲಿ ಪಾಚಿ ಗಿಡಗಳು ಬೆಳೆದಿವೆ. ಅದನ್ನು ತೆರವುಗೊಳಿಸದಿದ್ದರೆ ಈ ಕೆರೆ ಸಂಪೂರ್ಣ ಕೆಟ್ಟುಹೋಗಲಿದೆ ಎಂದು ಗ್ರಾಮದ ನಿವಾಸಿ ರಾಜಣ್ಣ ಆತಂಕ ವ್ಯಕ್ತಪಡಿಸಿದರು.

‘ಹೆಸರಘಟ್ಟ ಕೆರೆಯಿಂದ ದಾಸರಹಳ್ಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ದಾಸರಹಳ್ಳಿಗೆ ಕೆರೆಯ ನೀರನ್ನು ಸರಬರಾಜು ಮಾಡುತ್ತಿಲ್ಲ. ಮಳೆಯಿಂದ ತುಂಬಿದ ಕೆರೆಯ ನೀರು ಕೆರೆಯಲ್ಲೇ ನಿಂತು ಹಾಳಾಗುತ್ತಿದೆ. ನಿಂತ ನೀರಿಗೆ ಅನೇಕ ಕಸಕಡ್ಡಿಗಳು ಬಂದು ಸೇರಿಕೊಳ್ಳುತ್ತಿರುವುದರಿಂದ ಮತ್ತು ಪಾಚಿ ಗಿಡಗಳು ಬೆಳೆಯುತ್ತಿರುವುದರಿಂದ ನೀರು ಕುಲಷಿತಗೊಳ್ಳುತ್ತಿದೆ’ ಎಂದು ಗ್ರಾಮದ ಹಿರಿಯ ನಿವಾಸಿ ನಾರಾಯಣ್ ಭಟ್ಟ ಹೇಳಿದರು.

ಸೊಣೇನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಪ್ರತಿಕ್ರಿಯಿಸಿ ‘ಹೆಸರಘಟ್ಟದ ಸುತ್ತಮುತ್ತ ಇರುವ ಬ್ಯಾತ, ಕಾಕೋಳು ಮತ್ತು ಬುಡವನಹಳ್ಳಿ ಕೆರೆಗಳಿಂದ ಕಸ ಕಡ್ಡಿಗಳು ಈ ಕೆರೆಗೆ ಹರಿದು ಹೋಗುತ್ತಿವೆ. ಕೆರೆಯ ಹೂಳು ತೆಗೆದು ಅಭಿವೃದ್ದಿ ಪಡಿಸುವ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

ಯಲಹಂಕ ಶಾಸಕ ವಿಶ್ವನಾಥ್ ಅವರು ‘ಪ್ರಾಚೀನ ಕೆರೆಯನ್ನು ಸ್ವಚ್ಛಗೊಳಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿಲಾಗುವುದು’ ಎಂದರು.

ಕಾವೇರಿ – 4 ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಕೆ.ಧನಂಜಯ್ ಅವರು ಪ್ರತಿಕ್ರಿಯಿಸಿ ‘ಹೆಸರಘಟ್ಟ ಕೆರೆಯ ಸುತ್ತ ಬೇಲಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಕೆರೆಯಲ್ಲಿ ಬೆಳೆದಿರುವ ಪಾಚಿಗಿಡಗಳನ್ನು ತೆಗಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry