ಮಟ್ಟು ವಿರುದ್ಧ ಸುಳ್ಳು ಆರೋಪ: ಕ್ರಮಕ್ಕೆ ಮನವಿ

7

ಮಟ್ಟು ವಿರುದ್ಧ ಸುಳ್ಳು ಆರೋಪ: ಕ್ರಮಕ್ಕೆ ಮನವಿ

Published:
Updated:
ಮಟ್ಟು ವಿರುದ್ಧ ಸುಳ್ಳು ಆರೋಪ: ಕ್ರಮಕ್ಕೆ ಮನವಿ

ಬೆಂಗಳೂರು: ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಸಮಾಜದ ಅಶಾಂತಿಗೆ ಕಾರಣವಾಗುತ್ತಿರುವವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಹಿರಿಯ ಚಿಂತಕರು, ಲೇಖಕರು ಮತ್ತು ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಈ ಬಗ್ಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೋಮವಾರ ಮನವಿ ಸಲ್ಲಿಸಲಾಗಿದೆ. ರೋಹಿತ್‌ ಚಕ್ರತೀರ್ಥ ಎಂಬುವರ ಹತ್ಯೆಗೆ ಭಾಸ್ಕರ ಪ್ರಸಾದ್‌ ಅವರಿಗೆ ಅಮಿನ್‌ ಮಟ್ಟು ಸುಪಾರಿ ನೀಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ, ನಿರಾಧಾರ ಸಂಗತಿಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಹರಡಲಾಗಿರುವ ಈ ಸುಳ್ಳು ಆರೋಪವನ್ನು ಕೆಲ ಬಲಪಂಥೀಯ ಅಥವಾ ಸಮಾಜ ವಿದ್ರೋಹಿಗಳು ದುರ್ಬಳಕೆ ಮಾಡಿಕೊಳ್ಳಬಹುದು. ಅನಗತ್ಯವಾಗಿ ಸಮಾಜದಲ್ಲಿ ಅರಾಜಕತೆ, ಅಪನಂಬಿಕೆಗೆ ಈ ಪ್ರಕರಣ ಅವಕಾಶ ನೀಡಬಾರದು. ಈ ಬಗ್ಗೆ ಎಚ್ಚರಿಕೆಯಿಂದ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ಮಾಡಿದ ಆರೋಪದ ಮೇಲೆ ಬಲಪಂಥೀಯರ ಬಂಧನವಾಗುತ್ತಿದೆ. ಇದೇ ಹೊತ್ತಿನಲ್ಲಿ ಹತ್ಯೆಗೆ ಮಟ್ಟು ಅವರು ಸುಪಾರಿ ನೀಡಿದ್ದಾರೆ ಎನ್ನುವ ಸುದ್ದಿ ಹರಡಿ, ವಿಚಾರವಾದಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕುತಂತ್ರ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿರಿಯ ಲೇಖಕ ಎಸ್‌.ಜಿ.ಸಿದ್ದರಾಮಯ್ಯ, ಡಾ. ವಸುಂಧರಾ ಭೂಪತಿ, ಡಿಸ್‌ಎಸ್‌ಎಸ್‌ (ಅಂಬೇಡ್ಕರ್‌ ವಾದ) ಸಂಚಾಲಕ ಮಾವಳ್ಳಿ ಶಂಕರ್‌, ಡಿಎಸ್‌ಎಸ್‌ ಸಂಚಾಲಕ ಲಕ್ಷ್ಮಿ

ನಾರಾಯಣ ನಾಗವಾರ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry