ಲಯ ಕಂಡುಕೊಂಡ ಫುಟ್‌ಬಾಲ್‌ ತಾರೆ ನೇಮರ್‌

7

ಲಯ ಕಂಡುಕೊಂಡ ಫುಟ್‌ಬಾಲ್‌ ತಾರೆ ನೇಮರ್‌

Published:
Updated:
ಲಯ ಕಂಡುಕೊಂಡ ಫುಟ್‌ಬಾಲ್‌ ತಾರೆ ನೇಮರ್‌

ಲೀವರ್‌ಪೂಲ್‌ : ಮೂರು ತಿಂಗಳ ಹಿಂದೆ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನೇಮರ್‌ ಅವರು ಭಾನುವಾರ ಕ್ರೋವೆಷ್ಯಾ ವಿರುದ್ಧ ನಡೆದ ಪಂದ್ಯದಲ್ಲಿ ಆಟದ ಲಯಕ್ಕೆ ಮರಳಿದ್ದಾರೆ. ಇದರಿಂದ ನೇಮರ್‌ ಅವರ ಫಿಟ್‌ನೆಸ್‌ ಬಗ್ಗೆ ಆತಂಕಕ್ಕೊಳಗಾಗಿದ್ದ ಬ್ರೆಜಿಲ್‌ ಅಭಿಮಾನಿಗಳು ಈಗ ನಿರಾಳರಾಗಿದ್ದಾರೆ.

ಫೆಬ್ರುವರಿಯಲ್ಲಿ ಪ್ಯಾರಿಸ್‌ ಸೆಂಟ್‌ ಜರ್ಮೈನ್‌ ತಂಡದ ಪರವಾಗಿ ಆಡುತ್ತಿದ್ದ ವೇಳೆ ನೇಮರ್‌ ಅವರ ಬಲ ಪಾದದ ಮೂಳೆ ಮುರಿದಿತ್ತು. ನಂತರ ಮೂರು ತಿಂಗಳ ಕಾಲ ಅವರು ಅಂಗಳದಿಂದ ದೂರ ಉಳಿದಿದ್ದರು.

ಕ್ರೋವೆಷ್ಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬ್ರೆಜಿಲ್‌ ತಂಡವು 2–0 ಗೋಲುಗಳಿಂದ ಗೆದ್ದಿತ್ತು. ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ

ದ್ವೀತಿಯಾರ್ಧದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ನೇಮರ್‌, ಮೊದಲ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು.

ಈ ಪಂದ್ಯದ ನಂತರ ಮಾತನಾಡಿದ್ದ ಬ್ರೆಜಿಲ್‌ ತಂಡ್ ಡಿಫೆಂಡರ್‌ ತಿಯಾಗೊ ಸಿಲ್ವಾ, ‘ನೇಮರ್‌ ಅವರಂಥ ಅಗಾಧ ಸಾಮರ್ಥ್ಯ ಹೊಂದಿರುವ ಆಟಗಾರರು ತಂಡಕ್ಕೆ ಮರಳಿದರೆ ಸಹ ಆಟಗಾರರು ನಿರಾತಂಕವಾಗಿ ಆಡಬಹುದು. ಪಂದ್ಯ ಗೆಲ್ಲುವುದು ಕಷ್ಟವಾದಾಗ ಆ ಸವಾಲು ಮೀರಲು ನೇಮರ್‌ ನೆರವಾಗುತ್ತಾರೆ’ ಎಂದು ಹೇಳಿದ್ದರು.

‘ಮೊದಲಾರ್ಧದಲ್ಲಿ ಕ್ರೋವೆಷ್ಯಾ ದಿಂದ ತೀವ್ರ ಪೈಪೋಟಿ ಎದುರಿಸಬೇಕಾ ಯಿತು. ಹೆಚ್ಚಿನ ಒತ್ತಡ ನಮ್ಮ ಮೇಲಿತ್ತು. ನೇಮರ್‌ ಪಂದ್ಯದ ಗತಿ ಬದಲಿಸಿದರು. ಆದರೆ, ಇದೇ ರೀತಿ ಪ್ರತಿ ಪಂದ್ಯದಲ್ಲೂ ಕೇವಲ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಬಾರದು’ ಎಂದು ಬ್ರೆಜಿಲ್‌ ತಂಡದ ಕೋಚ್‌ ಟಿಟೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry