ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪರಿಸರ ದಿನ: ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಗಿಡಗಳ ವಿತರಣೆ

Last Updated 5 ಜೂನ್ 2018, 4:45 IST
ಅಕ್ಷರ ಗಾತ್ರ

ಬೆಂಗಳೂರು, ಮಂಗಳೂರು, ಮೈಸೂರು:‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಗುತ್ತಿದೆ.

ಬೆಂಗಳೂರಿನ ಜಯನಗರದಲ್ಲಿ ಬೆಳಿಗ್ಗೆ ಗಿಡಗಳನ್ನು ವಿತರಿಸುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಇಂದಿರಾ ನಗರದ ವುಡ್ಸ್‌ಪಾರ್ಕ್‌ನಲ್ಲಿಯೂ ಸಸಿಗಳನ್ನು ವಿತರಣೆ ಮಾಡಲಾಯಿತು.

ಇಂದಿರಾನಗರ ನಿವಾಸಿ ಕುಸುಮಾ

ಪರಿಸರ ಸಂರಕ್ಷಣೆ ಯೋಜನೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು

ಪರಿಸರ ದಿನಾಚರಣೆಯದಂದು ಸಸಿಗಳ ವಿತರಣೆ ಮೂಲಕ ಜಾಗೃತಿ ಮೂಡಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ಯುವ ಜನತೆ ಇಂತಹ ಕಾರ್ಯಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಎಲ್ಲರೂ ಕೈಜೊಡಿಸಿದರೆ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ವಿದೇಶಗಳಲ್ಲಿ ಪರಿಸರ ಸಂರಕ್ಷಣೆಗಾಗಿ ಕೈಗೊಳ್ಳುತ್ತಿರುವ ಯೋಜನೆಗಳನ್ನು ನಮ್ಮ ದೇಶದಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪ್ರತಿಕ್ರಿಯಿಸಿದರು. ಇಂದಿರಾನಗರ ನಿವಾಸಿ ಕುಸುಮಾಅವರು.

ಶಾರದಾ ಪಾಟೀಲ.

ಉಸಿರಾಡೊ ಗಾಳಿಯನ್ನಾದರೂ ಸ್ವಚ್ಛವಾಗಿಟ್ಟುಕೊಳ್ಳೋಣ

ಸುಶಿಕ್ಷಿತರಿಂದಲೇ ಪರಿಸರ ಹಾನಿಯಾಗುತ್ತಿದೆ. ಸಿಕ್ಕ ಸಿಕ್ಕಲೆಲ್ಲ ಧೂಮಪಾನ, ಮೂತ್ರ ವಿಸರ್ಜನೆ, ಕಸ ಎಸೆಯುತ್ತಾರೆ. ಅಧಿಕಾರಿಗಳು, ಸಿರಿವಂತರೂ ಇದಕ್ಕೆ ಹೊರತಾಗಿಲ್ಲ. ಕಾನೂನು ಪಾಲನೆಗಿಂತ ಮುರಿಯುವುದರಲ್ಲೆ ನಮ್ಮ ಜನ ಎತ್ತಿದ ಕೈ ಎನ್ನುವುದು ವಿಪರ್ಯಾಸ. ಉಸಿರಾಡೊ ಗಾಳಿಯನ್ನಾದರೂ ಸ್ವಚ್ಛವಾಗಿಟ್ಟುಕೊಳ್ಳೋಣ ಎಂದು ಪರಿಸರದ ಬಗೆಗಿನ ಕಾಳಜಿ ವ್ಯಕ್ತಪಡಿಸಿದರು ಇಂದಿರಾ ನಗರ ನಿವಾಸಿ ಶಾರದಾ ಪಾಟೀಲ.

ಮಂಗಳೂರಿನಲ್ಲಿ ಸಸಿಗಳನ್ನು ವಿತರಣೆ ಮಾಡಲಾಯಿತು.

ಸಾರ್ವಜನಿಕರ ಮೆಚ್ಚುಗೆ

ಮಂಗಳೂರು ವರದಿ: ಇಲ್ಲಿನ ಕದ್ರಿ ಉದ್ಯಾನದಲ್ಲಿ ಬೆಳಿಗ್ಗೆ 6 ರಿಂದಲೇ ಗಿಡ ವಿತರಣೆ ಆರಂಭವಾಗಿದೆ. 7 ಗಂಟೆಯ ವೇಳೆಗೆ ನೂರಾರು ಗಿಡಗಳು ಖಾಲಿಯಾದವು.

ಪತ್ರಿಕೆ ವತಿಯಿಂದ ನಡೆಯುತ್ತಿರುವ ವಿಶ್ವ ಪರಿಸರ ದಿನದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೈಸೂರಿನಲ್ಲಿಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು.ವನ್ಯಜೀವಿ ಛಾಯಾಗ್ರಾಹಕ ಕೃಪಾಕರ, ಶಾಸಕ ಎಲ್.ನಾಗೇಂದ್ರ, ಪಾಲಿಕೆ ಸದಸ್ಯ ಆರ್.ಲಿಂಗಪ್ಪ ಇದ್ದಾರೆ.

ಮೈಸೂರು ವರದಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 'ಪ್ರಜಾವಾಣಿ ಮತ್ತು ಡೆಕನ್ ಹೆರಾಲ್ಡ್' ಬಳಗದ ವತಿಯಿಂದ ನಗರದಲ್ಲಿನ ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು.

ವನ್ಯಜೀವಿ ಛಾಯಾಗ್ರಾಹಕ ಕೃಪಾಕರ, ಶಾಸಕ ಎಲ್.ನಾಗೇಂದ್ರ, ಪಾಲಿಕೆ ಸದಸ್ಯ ಆರ್.ಲಿಂಗಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT