ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ನಗರಕ್ಕೆ ಹಸಿರು ಸಂಪದ ಬಳಗ

ತಾಳಿಕೋಟೆಯಲ್ಲಿ ಒಂದಾದ ಸಂಘ–ಸಂಸ್ಥೆಗಳು; ವೈದ್ಯ, ಶಿಕ್ಷಕರ ಸಮುದಾಯ
Last Updated 5 ಜೂನ್ 2018, 10:20 IST
ಅಕ್ಷರ ಗಾತ್ರ

ತಾಳಿಕೋಟೆ: ಪಟ್ಟಣದಲ್ಲಿ ಪುರಸಭೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕೂಟವಾದ ಹಸಿರು ಸಂಪದ ಬಳಗದ ಸಹಯೋಗದಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ಸ್ಮರಣಿಯವಾಗಿಸುವ ಕೆಲಸಕ್ಕೆ ಚಾಲನೆ ದೊರೆತಿದೆ.

ಅದಕ್ಕಾಗಿ ಪರಿಸರ ಸಂಬಂಧಿ ಸಾಮಾಜಿಕ ಕೆಲಸಗಳ ನಿರ್ವಹಣೆಗೆಂದು ‘ಹಸಿರು ಸಂಪದ ಬಳಗ’ ಎಂಬ ಸಂಘಟನೆಯು ಅಸ್ತಿತ್ವಕ್ಕೆ ಬಂದಿದೆ. ಈ ಬಗ್ಗೆ ಭಾನುವಾರ ಸಂಜೆ ಇಲ್ಲಿನ ಪ್ರತಿಭಾಲೋಕ ಕರಿಯರ್‌ ಅಕಾಡಮಿಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಂತಿಮ ರೂಪರೇಷೆ ನೀಡಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎ.ಬಿ.ಕಲಾಲ ಅವರು ಸಮುದಾಯದ ನೆರವಿಲ್ಲದೆ ಯಾವ ಚಟುವಟಿಕೆಗಳೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದಿಲ್ಲ. ಪಟ್ಟಣದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ವಿವಿಧ ಸಂಘಟನೆಗಳು ಕೈ ಜೋಡಿಸಲು ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಸಭೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಹಿರಿಯ ವೈದ್ಯ ವಿ.ಎಸ್‌.ಕಾರ್ಚಿ ವೈದ್ಯ ಬಳಗದಿಂದ ಅಗತ್ಯ ನೆರವಿನ ಭರವಸೆ ನೀಡಿದರು. ಪಟ್ಟಣವನ್ನು ಸ್ವಚ್ಛ ನಗರಿ, ಹಸಿರು ನಗರಿ ಹಾಗೂ ನೀರಿನ ಸಮರ್ಪಕ ಸದ್ಬಳಕೆ ನಗರಿಯನ್ನಾಗಿಸಬೇಕು. ಪರಿಸರ ಸ್ನೇಹಿ ಚಟುವಟಿಕೆಗಳನ್ನು ವಿವಿಧ ಹಂತಗಳಲ್ಲಿ ಹಮ್ಮಿಕೊಳ್ಳುವುದು. ಅದಕ್ಕಾಗಿ ಮಾಡಬೇಕಾದ ಚಟುವಟಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಪರಿಸರ ಸ್ನೇಹಿ ಕೆಲಸಗಳನ್ನು ಒಂದೊಂದೆ ಹಂತಹಂತವಾಗಿ ಅಭಿವೃದ್ಧಿ ಪಡಿಸಲು ಸಭೆ ತೀರ್ಮಾನಿಸಿತು.

ಹಂತಹಂತವಾಗಿ ಒಂದೊಂದು ಕೆಲಸಗಳನ್ನು ಸಂಪೂರ್ಣ ಜವಾಬ್ದಾರಿಯೊಂದಿಗೆ ನಿರಂತರವಾದ ಉಸ್ತುವಾರಿಯನ್ನು ಹೆಗಲೇರಿಸಿಕೊಳ್ಳಲು ಸಭೆಯಲ್ಲಿದ್ದ ಸಂಘಟನೆಗಳು ಒಪ್ಪಿದವು. ಇದರಲ್ಲಿ ಸ್ಥಳೀಯ ವೈದ್ಯರ ಸಂಘ, ರೋಟರಿ ಕ್ಲಬ್‌, ಫ್ರೆಂಡ್ಸ್‌ ರಿಕ್ರಿಯೇಷನ್‌ ಕ್ಲಬ್‌, ಕಸಾಪ, ಬಸವ ಸಮಿತಿ, ಕವೀ ಫೌಂಡೇಷನ್‌, ಔಷಧಿ ವ್ಯಾಪಾರಸ್ಥರ ಸಂಘ, ನಮ್ಮ ಗೆಳೆಯರ ಬಳಗ, ಕರವೇ, ಜಯ ಕರ್ನಾಟಕ, ಸೃಜನಶೀಲ ಶಿಕ್ಷಕರ ಬಳಗ, ಸಹೃದಯ ಶಿಕ್ಷಕರ ಬಳಗ, ಚೈತನ್ಯ ಸ್ನೇಹಿತರ ಬಳಗ ಕೈ ಜೋಡಿಸಿವೆ.

ಪುರಸಭೆ ಜೂ.5ರಂದು ಆಯೋಜಿಸಿರುವ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗುಂಪಿನ ಎಲ್ಲ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT