ಕಾರ್ಯಕರ್ತರಿಂದ ಮತ್ತೊಮ್ಮೆ ಶಾಸಕನಾದೆ

7
ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಹೇಳಿಕೆ

ಕಾರ್ಯಕರ್ತರಿಂದ ಮತ್ತೊಮ್ಮೆ ಶಾಸಕನಾದೆ

Published:
Updated:

ರಾಯಚೂರು: ‘ಬಿಜೆಪಿ ಸೇರುವ ಮುಂಚೆ ಕೊಂಚ ಚಂಚಲ ಭಾವನೆ ಯಿತ್ತು, ಆದರೆ, ಪಕ್ಷ ಸೇರ್ಪಡೆಯಾದ ನಂತರ ಇದು ನನ್ನ ಮನೆ ಎಂಬ ಭಾವನೆ ಮೂಡುವಂತೆ ಪಕ್ಷದ ಕಾರ್ಯಕರ್ತರು ನನ್ನನ್ನು ಸ್ವೀಕರಿಸಿ, ಶಾಸಕರನ್ನಾಗಿ ಮಾಡಿದ್ದಾರೆ’ ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಗರ ಘಟಕದಿಂದ ಸೋಮ ವಾರ ಆಯೋಜಿಸಿದ್ದ ಕಾರ್ಯಕರ್ತರ ಅಭಿನಂದನಾ ಹಾಗೂ ಶಾಸಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾವು ಶಾಸಕರಾಗಲು ಶ್ರಮಿಸಿದ ಪಕ್ಷದ ಕಾರ್ಯಕರ್ತರ ಸಹಕಾರಕ್ಕೆ ದಿನದ 24ಗಂಟೆಯೂ ಸಿದ್ಧನಾಗಿರುತ್ತೇನೆ. ಜನರಿಗೆ ನೀಡಿದ ಭರವಸೆಗಳ ಬಗ್ಗೆಯೂ ಕಾರ್ಯಕರ್ತರು ಎಚ್ಚರಿಸುವ ಮೂಲಕ ಭರವಸೆ ಈಡೇರುವಂತೆ ಮಾಡಬೇಕು ಎಂದರು.

ಯಾವುದೇ ನಾಯಕ ಮುಖಂಡ ರಿಂದ ಬೆಳೆಯುವುದಿಲ್ಲ. ನಾಯಕನಾಗಿ ಬೆಳೆಯಲು ಪಕ್ಷದ ಕಾರ್ಯಕರ್ತರೇ ಕಾರಣರಾಗಿದ್ದಾರೆ. 35 ವಾರ್ಡುಗಳ ಪೈಕಿ 21ರಲ್ಲಿ ಬಿಜೆಪಿಗೆ ಮುನ್ನಡೆ ಲಭಿಸಲು ಪಕ್ಷದ ಕಾರ್ಯಕರ್ತರ ಶ್ರಮವೇ ಕಾರಣವಾಗಿದ್ದು, ನನ್ನ ಅನುಪಸ್ಥಿತಿಯಲ್ಲೂ ಕಾರ್ಯಕರ್ತರು ಮತದಾರರಲ್ಲಿಗೆ ಹೋಗಿ ಮತ ಯಾಚನೆ ಮಾಡಿದ್ದಾರೆ. ರಾತ್ರಿಯಲ್ಲೂ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಕ್ಷದಲ್ಲಿ 12 ಜನ ಆಕಾಂಕ್ಷಿಗಳಿದ್ದರೂ, ನನಗೆ ಟಿಕೆಟ್ ನೀಡಿದ ನಂತರ 10ಜನ ಆಕಾಂಕ್ಷಿಗಳು ನನ್ನ ಜೊತೆಗೆ ನಿಂತು ನನ್ನ ಗೆಲುವಿಗೆ ಸಹಕರಿಸಿದ್ದು, ಅವರಿಗೆ ನಾನು ಚಿರ ಋಣಿಯಾಗಿದ್ದೇನೆ ಎಂದರು.

ಮುಖಂಡ ಎ.ಪಾಪಾರೆಡ್ಡಿ ಮಾತ ನಾಡಿ, ಡಾ.ಶಿವರಾಜ ಪಾಟೀಲ ಅವರು ಶಾಸಕರಾಗಲು ಪಕ್ಷದ ಕಾರ್ಯಕರ್ತರೇ ಕಾರಣವಾಗಿದ್ದು, ಕಾರ್ಯಕರ್ತರ ಮನಸ್ಸಿಗೆ ನೋವಾಗದಂತೆ ಶಾಸಕರು ನಡೆದುಕೊಳ್ಳಬೇಕು. ಕಾರ್ಯಕರ್ತರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು. ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದವರೂ ಗೆಲ್ಲಲು ಸಾಧ್ಯವಾಗಿಲ್ಲ. ಬಿಜೆಪಿ ಪಕ್ಷದ ಕಾರ್ಯಕರ್ತರು ಬಲಿಷ್ಠವಾಗಿದ್ದರಿಂದ ಡಾ.ಶಿವರಾಜ ಪಾಟೀಲ ಶಾಸಕರಾಗಿದ್ದಾರೆ ಎಂದರು.

ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಮುಖಂಡರಾದ ಅಶೋಕ ಗಸ್ತಿ, ಆರ್.ತಿಮ್ಮಯ್ಯ, ತ್ರಿವಿಕ್ರಮ ಜೋಷಿ ಮಾತನಾಡಿದರು.

ನಗರ ಘಟಕದ ಅಧ್ಯಕ್ಷ ದೊಡ್ಡಮಲ್ಲೇಶ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಎನ್.ಶಂಕರಪ್ಪ, ರಾಜಕುಮಾರ, ಶಿವಬಸಪ್ಪ ಮಾಲಿಪಾಟೀಲ, ಆರ್.ಕೆ.ಅಮರೇಶ, ಆಂಜನೇಯ, ನರಸಪ್ಪ, ಗೋವಿಂದ, ರಾಮು ಗಿಲ್ಲೇರಿ ಇದ್ದರು.

**

ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ಮುಗಿದ ನಂತರ ಬೃಹತ್‌ ಕಾರ್ಯಕ್ರಮ ಹಮ್ಮಿಕೊಂಡು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುವೆ

– ಡಾ.ಶಿವರಾಜ ಪಾಟೀಲ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry