20 ಹುದ್ದೆ; 3 ಸಾವಿರ ಅಭ್ಯರ್ಥಿಗಳು; ಭಾರೀ ನೂಕುನುಗ್ಗಲು

7

20 ಹುದ್ದೆ; 3 ಸಾವಿರ ಅಭ್ಯರ್ಥಿಗಳು; ಭಾರೀ ನೂಕುನುಗ್ಗಲು

Published:
Updated:
20 ಹುದ್ದೆ; 3 ಸಾವಿರ ಅಭ್ಯರ್ಥಿಗಳು; ಭಾರೀ ನೂಕುನುಗ್ಗಲು

ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯಲ್ಲಿರುವ ನೈರುತ್ಯ ರೈಲ್ವೆಯ ಕೇಂದ್ರ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ ಹುದ್ದೆಗೆ ಮಂಗಳವಾರ ಕರೆದಿದ್ದ ಸಂದರ್ಶನದ ವೇಳೆ, ಭಾರೀ ನೂಕುನುಗ್ಗಲು ಉಂಟಾಯಿತು. ಇದರಿಂದಾಗಿ, ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೂಡಲೇ ರೈಲ್ವೆ ಪೊಲೀಸರು ಸ್ಥಳಕ್ಕೆ ಬಂದು, ಪರಿಸ್ಥಿತಿ ನಿಯಂತ್ರಿಸಿದರು.

ಖಾಲಿ ಇದ್ದ 20 ಸ್ಟಾಫ್‌ ನರ್ಸ್‌ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಭರ್ತಿ ಮಾಡಲು ರೈಲ್ವೆ ಸಂದರ್ಶನ ನಿಗದಿಪಡಿಸಿತ್ತು. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಪಂಜಾಬ್ ಸೇರಿ ವಿವಿಧ ರಾಜ್ಯಗಳ ಅಂದಾಜು 3 ಸಾವಿರ ಅಭ್ಯರ್ಥಿಗಳು ಬೆಳಿಗ್ಗೆಯಿಂದಲೇ ಕೇಂದ್ರ ಆಸ್ಪತ್ರೆ ಎದುರು ಜಮಾಯಿಸಿದ್ದರು.

‘ಬೆಳಿಗ್ಗೆ 10ಕ್ಕೆ ಸಂದರ್ಶನ ನಿಗದಿಯಾಗಿತ್ತು. ಆದರೆ, 11 ಗಂಟೆಯಾದರೂ ಆರಂಭಿಸಲಿಲ್ಲ. ಇದರಿಂದಾಗಿ, ಬೆಳಿಗ್ಗೆಯಿಂದ ಕಾದು ಹೈರಾಣಾಗಿದ್ದವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲವರು ಒಳಗೆ ನುಗ್ಗಿ, ಘೋಷಣೆ ಕೂಗಿದರು. ಇದರಿಂದಾಗಿ ಕೆಲ ಹೊತ್ತು ಗದ್ದಲ ಏರ್ಪಟ್ಟಿತ್ತು’ ಎಂದು ಸಂದರ್ಶನಕ್ಕೆ ಬಂದಿದ್ದ ವಿಜಯಪುರದ ರಮೇಶ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry