ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಿರತೆ ಕಾಯ್ದುಕೊಂಡ ಹಣ್ಣು, ತರಕಾರಿ ಬೆಲೆ

ಮಾವು ವಹಿವಾಟು ಕುಸಿತ; ನಿಫಾ ವೈರಸ್‌ ಭಯ
Last Updated 5 ಜೂನ್ 2018, 11:02 IST
ಅಕ್ಷರ ಗಾತ್ರ

ಮಂಡ್ಯ: ಮಾರುಕಟ್ಟೆಗೆ ಸ್ಥಳೀಯ ತರಕಾರಿ ಪೂರೈಕೆ ಕಡಿಮೆ ಇದ್ದರೂ ಹೊರರಾಜ್ಯಗಳಿಂದ ಉತ್ತಮ ಗುಣಮಟ್ಟದ ತರಕಾರಿ ಪೂರೈಕೆಯಾಗುತ್ತಿದೆ. ಹೀಗಾಗಿ ತರಕಾರಿ ಬೆಲೆ ಸ್ಥಿರವಾಗಿದೆ.

ಬಿರುಗಾಳಿ ಸಹಿತ ಮಳೆಗೆ ಸೊಪ್ಪಿನ ಬೆಳೆ ನಾಶವಾಗಿದ್ದು ಕೊತ್ತಂಬರಿ ಸೇರಿ ಸೊಪ್ಪಿನ ಬೆಲೆ ಕೊಂಚ ಹೆಚ್ಚಾಗಿದೆ. ಬೀನ್ಸ್‌ ಕಳೆದ ವಾರದಂತೆ ₹ 60ಕ್ಕೆ ಕೆ.ಜಿ. ಮಾರಾಟವಾಗುತ್ತಿದೆ. ಕೆ.ಜಿ.ಗೆಡ್ಡೆಕೋಸು ಬೆಲೆಯೂ ₹60ಕ್ಕೆ ಮಾರಾಟವಾಗುತ್ತಿದೆ. ಶುಂಠಿ ₹80, ಬೆಳ್ಳುಳ್ಳಿ ₹ 70ಕ್ಕೆ ಮಾರಾಟವಾಗುತ್ತಿದೆ. ಕೆ.ಜಿ.ಈರುಳ್ಳಿ ಬೆಲೆ ಕೊಂಚ ಹೆಚ್ಚಾಗಿದ್ದು ₹ 20 ಇದೆ. ಕಳೆದ ವಾರ ₹ 15 ಇತ್ತು. ಎಲೆಕೋಸು ಹಾಗೂ ಸೋರೆಕಾಯಿ ಬೆಲೆ ಕಡಿಮೆಯಾಗಿದ್ದು ₹ 10 ಇದೆ. ಬದನೆಕಾಯಿ, ಕುಂಬಳಕಾಯಿ, ಸಾಂಬಾರ್‌ ಸೌತೆ ₹ 20, ತೊಂಡೆಕಾಯಿ ಕ್ಯಾರೆಟ್, ಬೀಟರೂಟ್, ಆಲೂಗಡ್ಡೆ, ಹೂಕೋಸು, ಬೆಂಡೆಕಾಯಿ, ಮಾವಿನಕಾಯಿ, ಸೀಮೆ ಬದನೆಕಾಯಿ ₹ 30, ಹೀರೆಕಾಯಿ, ಚವಳಿಕಾಯಿ, ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ಡೊಣ ಮೆಣಸಿನಕಾಯಿ, ಚಪ್ಪರದ ಅವರೆ, ಸುವರ್ಣಗೆಡ್ಡೆ, ಹಾಗಲಕಾಯಿ, ಫಾರಂ ಬೆಳ್ಳುಳ್ಳಿ ₹ 40ಕ್ಕೆ ಕೆ.ಜಿ ಮಾರಾಟವಾಗುತ್ತಿವೆ.

ಹಣ್ಣುಗಳ ಬೆಲೆ ಕೊಂಚ ಇಳಿಕೆ
ಸೇಬು ಕಳೆದ ವಾರ ₹ 160 ರಿಂದ ₹ 200ಕ್ಕೆ ಕೆ.ಜಿ ಮಾರಾಟವಾಗುತ್ತಿತ್ತು. ಈ ವಾರ ₹ 150 ರಿಂದ ₹ 170ಕ್ಕೆ ಇಳಿದಿದೆ. ದಾಳಿಂಬೆ ಕಳೆದ ವಾರ ₹ 140 ಇತ್ತು, ಈ ವಾರ ₹ 100ಕ್ಕೆ ಕೆ.ಜಿ. ಮಾರಾಟವಾಗುತ್ತಿದೆ. ಮೋಸಂಬಿ ₹ 100, ಕಿತ್ತಳೆ ₹ 100, ದ್ರಾಕ್ಷಿ ₹ 120, ಕಲ್ಲಂಗಡಿ ₹ 20, ಕರಬೂಜ ₹ 25 ಏಲಕ್ಕಿ ಬಾಳೆ ₹ 40 ಹಾಗೂ ಪಚ್ಚ ಬಾಳೆ ₹30ಕ್ಕೆ ಮಾರಾಟವಾಗುತ್ತಿವೆ. ಮಾವಿನ ಹಣ್ಣಿನ ಬೆಲೆ ಸ್ಥಿರವಾಗಿದ್ದು ಬಾದಾಮಿ ಹಣ್ಣು ₹ 40, ಸೇಂದೂರ ₹ 50, ರಸಪೂರಿ ₹ 40ಕ್ಕೆ ಮಾರಾಟವಾಗುತ್ತಿವೆ.

‘ಮಾವಿನಹಣ್ಣಿನ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ನಿಫಾ ವೈರಸ್‌ ಭಯದಿಂದ ಜನರು ಹಣ್ಣು ಸೇವಿಸುತ್ತಿಲ್ಲ. ಹೀಗಾಗಿ ವಹಿವಾಟು ಕುಸಿತ ಕಂಡಿದೆ’ ಎಂದು ಹಣ್ಣಿನ ವ್ಯಾಪಾರಿ ಅನ್ವರ್ ಪಾಷಾ ಹೇಳಿದರು.

ಈ ವಾರ ಹೂವಿನ ಬೆಲೆ ಸ್ಥಿರವಾಗಿದೆ. ಮಾರು ಮಲ್ಲಿಗೆ ₹ 30, ಮೊಗ್ಗು ಮಲ್ಲಿಗೆ ₹ 40, ಕನಕಾಂಬರ ಮಾರಿಗೆ ₹ 30, ಸೇವಂತಿಗೆ ₹ 30, ಬಟನ್‌ ಗುಲಾಬಿ ಕೆ.ಜಿಗೆ ₹ 120ರಂತೆ ಮಾರಾಟವಾಗುತ್ತಿವೆ. ಸಣ್ಣ ಮಲ್ಲಿಗೆ ಹಾರ ₹ 40ಕ್ಕೆ ಸಿಗುತ್ತಿದೆ. ಸುಗಂಧ ಹಾರ ₹ 50–100, ದೊಡ್ಡಹಾರ ₹ 300ಕ್ಕೆ ಮಾರಾಟವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT