ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪರಿಸರ ದಿನವನ್ನು ‘ವಿಶ್ವ ಅಸ್ತಿತ್ವ ದಿನ’ ಎನ್ನೋಣವೇ?: ಗೌತಮ್‌ ‘ಗಂಭೀರ’ ಆಲೋಚನೆ

Last Updated 5 ಜೂನ್ 2018, 12:32 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ಗೌತಮ್‌ ಗಂಭೀರ್‌ ಅವರು, ನಾನು ವಿಶ್ವ ಪರಿಸರ ದಿನದ ಹೆಸರನ್ನು ವಿಶ್ವ ಅಸ್ತಿತ್ವ ದಿನವಾಗಿ ಬದಲಿಸಬಹುದೆಂದು ಆಲೋಚಿಸಿದೆ ಎಂದು ಟ್ವೀಟ್‌ ಮಾಡಿದ್ದಾರೆ.

‘ವಿಶ್ವ ಪರಿಸರ ದಿನದ ಹೆಸರನ್ನು ವಿಶ್ವ ಅಸ್ತಿತ್ವ ದಿನವಾಗಿ ಬದಲಿಸಬಹುದೆಂದು ಆಲೋಚಿಸಿದೆ. ಬಹುಶಃ ಆಗ ನಾವು ಎಚ್ಚರಗೇಡಿತನ ತುತ್ತತುದಿ ತಲುಪಿದ್ದೇವೆ ಮತ್ತು ದುರಾಸೆಯಿಂದ ವಿಪತ್ತು ತಂದೊಡ್ಡಿಕೊಳ್ಳುತ್ತಿರುವುದು ನಮಗೆ ಅರಿವಾಗಬಹುದು. ಶಿಮ್ಲಾದಲ್ಲಿ ಉಂಟಾಗಿರುವ ನೀರಿನ ಅಭಾವದ ಕಡೆಗೊಮ್ಮೆ ನೋಡಿ’ ಎಂದು ಟ್ವೀಟಿಸಿದ್ದಾರೆ.

ಹಲವು ಜನಪರ ನಿಲುವುಗಳ ಕಾರಣಕ್ಕೆ ಕ್ರೀಡೆಯಾಚೆಗೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಗಂಭೀರ್‌ ಪರಿಸರ ಕಾಳಜಿ ದೃಷ್ಟಿಯಿಂದ ಈ ರೀತಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT