ಎಚ್.ಎನ್ ಉತ್ಸವ ಇಂದಿನಿಂದ

7

ಎಚ್.ಎನ್ ಉತ್ಸವ ಇಂದಿನಿಂದ

Published:
Updated:
ಎಚ್.ಎನ್ ಉತ್ಸವ ಇಂದಿನಿಂದ

ಬೆಂಗಳೂರು ಲಲಿತಕಲಾ ಪರಿಷತ್ ಏರ್ಪಡಿಸಿರುವ ‘ಪದ್ಮಭೂಷಣ್ ಡಾ.ಎಚ್.ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವ’ ಜೂನ್ 6 ರಿಂದ ಜೂನ್ 10ರ ವರೆಗೆ ನಡೆಯಲಿದೆ.

ಶತಮಾನೋತ್ಸವ ದಾಟಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿ ನಗರದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಇಂಥ ಸಂಸ್ಥೆಗೆ ಮೊದನಿಂದಲೂ ಅಹರ್ನಿಶಿ ದುಡಿದು, ಸಂಸ್ಥೆಯ ಖ್ಯಾತಿಗೆ ಕಾರಣರಾದ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರ ಹೆಸರು ನ್ಯಾಷನಲ್ ಕಾಲೇಜಿನೊಂದಿಗೆ ತಳಕು ಹಾಕಿಕೊಂಡಿರುವುದು, ಸಹಜವಾಗೇ ಇದೆ.

ಉಪಾಧ್ಯಾಯರಿಂದ ಉಪಕುಲಪತಿಗಳವರೆಗೆ ಅವರು ಸಲ್ಲಿಸಿರುವ ಸೇವೆ ಅಪಾರ. ಯುವಕರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಅವರು ‘ಸೈನ್ಸ್ ‍ಫೋರಂ’ (ವಿಜ್ಞಾನ ವೇದಿಕೆ) ಸ್ಥಾಪಿಸಿದರೆ, ಕಲಾಬಿರುಚಿ ಬೆಳೆಸಲು ‘ಲಲಿತಕಲಾ ಪರಿಷತ್’ ಪ್ರಾರಂಭಿಸಿದರು.

1992ರಲ್ಲಿ ಸ್ಥಾಪನೆಯಾದ ಬೆಂಗಳೂರು ಲಲಿತಕಲಾ ಪರಿಷತ್ ಪ್ರತಿ ತಿಂಗಳೂ ಎರಡು ಕಾರ್ಯಕ್ರಮ ಆಯೋಜಿಸುತ್ತಿದೆ. ತಿಂಗಳ ಮೊದಲ ಹಾಗೂ ಮೂರನೆಯ ಶುಕ್ರವಾರಗಳ ಸಂಜೆ ಜಯನಗರ ನ್ಯಾಷನಲ್ ಕಾಲೇಜಿನ ಆವರಣದಲ್ಲಿರುವ ಡಾ.ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆಯುವ ಈ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ. 900ಕ್ಕೂ ಹೆಚ್ಚು ಕಛೇರಿಗಳು ಈವರೆಗೂ ನಡೆದಿವೆ ಎಂದು ಬೆಂಗಳೂರು ಲಲಿತಕಲಾ ಪರಿಷತ್ತಿನ ಅಧ್ಯಕ್ಷ ಡಾ.ಎ.ಎಚ್.ರಾಮರಾಯ ಅವರು ಹೇಳುತ್ತಾರೆ.

ಮೊದಲಿನಿಂದಲೂ ನಡೆಸಿಕೊಂಡು ಬರುತ್ತಿದ್ದ ಚೈತ್ರೋತ್ಸವವನ್ನು 2006ರಿಂದ ‘ಪದ್ಮಭೂಷಣ ಡಾ.ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವ’ವನ್ನಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪ್ರಾರಂಭದಿಂದಲೂ ರಾಮಸುಧಾ ಚಾರಿಟಬಲ್ ಟ್ರಸ್ಟ್‌ನವರೇ ಈ ಉತ್ಸವಗಳನ್ನು ಪ್ರಾಯೋಜಿಸುತ್ತಾ ಬಂದಿರುವುದು ಇನ್ನೊಂದು ಗಮನಾರ್ಹ ವಿಷಯ.

ಈ ವರ್ಷದ ಉತ್ಸವದ ವಿಶೇಷತೆಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ರಾಮರಾವ್, ‘ಬುಧವಾರದಿಂದ ಐದು ದಿನಗಳವರೆಗೆ ನಡೆಯುವ ಉತ್ಸವದಲ್ಲಿ ಶಾಸ್ತ್ರೀಯ ಸಂಗೀತ ಯುಗಳ ಗಾಯನ, ವಾದ್ಯ ಸಂಗೀತದಲ್ಲಿ ಯುಗಳ ಪಿಟೀಲು. ‘ಸಂಗೀತ ಸಂಭ್ರಮ’ದಲ್ಲಿ ದೇವರನಾಮ, ಭಾವಗೀತೆ, ಜನಪದ ಹಾಡುಗಳು ಹಾಗೂ ಕನ್ನಡ ಚಿತ್ರ ಗೀತೆಗಳು ಮಾರ್ದನಿಸಲಿವೆ. ಸಮೂಹ ನೃತ್ಯದಲ್ಲಿ ‘ಭರತಾಂಜಲಿ’ ಅಭಿನಯಿಸಿದರೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರ ‘ಕರಿಮಾಯಿ’ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಚಂದ್ರಶೇಖರ ಕಂಬಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಡಾ.ವಿಶ್ವೇಶತೀರ್ಥ ಶ್ರೀಪಾದಂಗಳವರು ಜೂನ್ 10ರಂದು ನಡೆಯಲಿರುವ ಸಮಾರೋಪದಲ್ಲಿ ಭಾಗಿಯಾಗಲಿದ್ದಾರೆ.

**

1992ರಲ್ಲಿ ಸ್ಥಾಪನೆಯಾದ ಬೆಂಗಳೂರು ಲಲಿತಕಲಾ ಪರಿಷತ್ ಪ್ರತಿ ತಿಂಗಳೂ ಎರಡು ಕಾರ್ಯಕ್ರಮ ಆಯೋಜಿಸುತ್ತಿದೆ. ತಿಂಗಳ ಮೊದಲ ಹಾಗೂ ಮೂರನೆಯ ಶುಕ್ರವಾರಗಳ ಸಂಜೆ ಜಯನಗರ ನ್ಯಾಷನಲ್ ಕಾಲೇಜಿನ ಆವರಣದಲ್ಲಿರುವ ಡಾ.ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆಯುವ ಈ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ. 900ಕ್ಕೂ ಹೆಚ್ಚು ಕಛೇರಿಗಳು ಈವರೆಗೂ ನಡೆದಿವೆ.

–ಡಾ.ಎ.ಎಚ್.ರಾಮರಾಯ, ಬೆಂಗಳೂರು ಲಲಿತಕಲಾ ಪರಿಷತ್ತಿನ ಅಧ್ಯಕ್ಷರು

**

ಇಂದು ಉದ್ಘಾಟನೆ

ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವ: ಉದ್ಘಾಟನೆ–ಡಾ.ಚಂದ್ರಶೇಖರ ಕಂಬಾರ. ಅಧ್ಯಕ್ಷತೆ–ಡಾ.ಎ.ಎಚ್.ರಾಮರಾವ್. ನಾಟಕ–ಸ್ಪಂದನ ತಂಡದಿಂದ ‘ಕರಿಮಾಯಿ’. ಆಯೋಜನೆ–ಬೆಂಗಳೂರು ಲಲಿತಕಲಾ ಪರಿಷತ್. ಸ್ಥಳ–ಡಾ.ಎಚ್.ನರಸಿಂಹಯ್ಯ ಕಲಾಕ್ಷೇತ್ರ, ಜಯನಗರ 8ನೇ ಬ್ಲಾಕ್. ಸಂಜೆ: 6.30

ಸಂಪರ್ಕ: 9845147814/ 9448411153

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry