ಲಕ್ಕಿ ಡ್ರಾ ವಿಜೇತರ ಫಲಿತಾಂಶ ಪ್ರಕಟ

7

ಲಕ್ಕಿ ಡ್ರಾ ವಿಜೇತರ ಫಲಿತಾಂಶ ಪ್ರಕಟ

Published:
Updated:
ಲಕ್ಕಿ ಡ್ರಾ ವಿಜೇತರ ಫಲಿತಾಂಶ ಪ್ರಕಟ

ಪೈ ಇಂಟರ್‌ ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಕಂಪನಿಯ ಲಕ್ಕಿ ಡ್ರಾ ಕೂಪನ್‌ಗಳ ವಿಜೇತರಿಗೆ ಈಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಫೆಬ್ರುವರಿ 24ರಿಂದ 28ರ ವರೆಗೆ ತನ್ನ ವ್ಯಾಪಾರ ಮಳಿಗೆಗಳಲ್ಲಿ ಕಂಪನಿಯು ಮಾರಾಟ ಮೇಳವನ್ನು ಆಯೋಜಿಸಿತ್ತು. ಈ ವೇಳೆ ವಸ್ತುಗಳನ್ನು ಖರೀದಿಸಿದ ಗ್ರಾಹಕರಿಗೆ ಕೂಪನ್‌ಗನ್ನು ನೀಡಲಾಗಿತ್ತು.

₹ 1 ಲಕ್ಷ ಮೌಲ್ಯದ ವಸ್ತುಗಳನ್ನು ಖರೀದಿಸಿದ 100 ಗ್ರಾಹಕರು, ₹25 ಸಾವಿರ ಮೌಲ್ಯದ ವಸ್ತುಗಳನ್ನು ಖರೀದಿಸಿದ 100 ಗ್ರಾಹಕರು, ₹5 ಸಾವಿರ ಮೌಲ್ಯದ ವಸ್ತುಗಳನ್ನು ಖರೀದಿಸಿದ 1,000 ಗ್ರಾಹಕರು ಹಾಗೂ  ₹250 ಮೌಲ್ಯದ ವಸ್ತುಗಳನ್ನು ಖರೀದಿಸಿದ 1 ಲಕ್ಷ ಗ್ರಾಹಕರು ಲಕ್ಕಿ ಡ್ರಾ ಬಹುಮಾನ ಪಡೆದಿದ್ದಾರೆ ಎಂದು ಕಂಪನಿಯು ಕಾರ್ಯಕ್ರಮದ ವೇಳೆ ಘೋಷಣೆ ಮಾಡಿದೆ.

ಯುಗಾದಿ ಹಾಗೂ ಬೇಸಿಗೆ ಅವಧಿಯಲ್ಲಿ ಪೈ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸಿದ ಗ್ರಾಹಕರು ಸಮೀಪದ ಮಳಿಗೆಗಳಲ್ಲಿ ಲಕ್ಕಿ ಡ್ರಾ ಬಹುಮಾನದ ಫಲಿತಾಂಶವನ್ನು ಪರಿಶೀಲಿಸಬಹುದು. ಪೈ ಇಂಟರ್‌ನ್ಯಾಷನಲ್‌ನ ಫೇಸ್‌ಬುಕ್‌ ಪೇಜ್‌ ಪರಿಶೀಲಿಸಬಹುದು.

ಪೈ ಇಂಟರ್‌ನ್ಯಾಷನಲ್‌ ನಡೆಸುವ ಮಾರಾಟ ಮೇಳಗಳಲ್ಲಿ ಲಕ್ಕಿ ಡ್ರಾ ವಿಜೇತರಿಗೆ ಇಲ್ಲಿಯವರೆಗೂ 234 ಕಾರು, ಎಲೆಕ್ಟ್ರಾನಿಕ್‌ ಉಪಕರಣಗಳು ಸೇರಿದಂತೆ ನಾನಾ ವಸ್ತುಗಳನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry