ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಯುತ ನಿಲುವು

Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

‘ರಾಮಮಂದಿರ ನಿರ್ಮಾಣಕ್ಕಿಂತಲೂ ಗಂಗಾನದಿಯ ಶುದ್ಧೀಕರಣ ಇಂದಿನ ಅಗತ್ಯ’ (ಪ್ರ.ವಾ., ಜೂನ್ 2). ಇದು ಪೇಜಾವರ ಶ್ರೀಗಳ ಹೇಳಿಕೆ.

ಪೇಜಾವರ ಶ್ರೀಗಳು ಇತರ ಪೀಠಾಧಿಪತಿಗಳಂತೆ ‘ತಟಸ್ಥ’ರಾಗಿ ನಿಲ್ಲದೆ, ಸಾಮಾಜಿಕ, ಧಾರ್ಮಿಕ, ರಾಜಕೀಯ ವಿದ್ಯಮಾನಗಳ ಬಗೆಗೆ ಆಗಾಗ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರ ಬಹುತೇಕ ಅಭಿಪ್ರಾಯಗಳು ಚರ್ಚಾಸ್ಪದವಾಗಿರುತ್ತವೆ ಎಂಬುದು ಬೇರೆ ಮಾತು. ಅವರು ವಿಚಾರವಾದಿಗಳ ಕಣ್ಣಿಗೆ ಮೂಲಭೂತವಾದಿಯಂತೆಯೂ, ಧಾರ್ಮಿಕರ ಕಣ್ಣಿಗೆ ಪ್ರಗತಿಪರರಂತೆಯೂ ಕಾಣುವುದುಂಟು. ಕಳೆದ ವರ್ಷ ಅವರು ನಡೆಸಿದ ಇಫ್ತಾರ್ ಕೂಟ ಕೂಡ ವಿವಾದಕ್ಕೆ ಒಳಗಾಗಿತ್ತು.

ಶ್ರೀಗಳು ಇಂದಿನ ಬಹುವಿವಾದಿತ, ಚರ್ಚಿತ, ಹಿಂದೂ ಸಂಘಟನೆಗಳ ಹಕ್ಕೊತ್ತಾಯವಾದ (ಬಿಜೆಪಿಗೆ ಚುನಾವಣಾ ಸಮಯದಲ್ಲಿ ಮಾತ್ರ ಜ್ಞಾಪಕಕ್ಕೆ ಬರುವ) ‘ರಾಮ ಮಂದಿರ’ ನಿರ್ಮಾಣಕ್ಕಿಂತಲೂ ಗಂಗಾನದಿಯ ನೈರ್ಮಲ್ಯವನ್ನೇ ಮುಖ್ಯವಾಗಿ ಪರಿಗಣಿಸಿರುವುದು ಶ್ಲಾಘನೀಯ. ಗಂಗಾ ನದಿಯ ವಿಚಾರ ಕೂಡ ಧಾರ್ಮಿಕವಾದದ್ದು ಎಂದು ಅವರ ವಿರೋಧಿಗಳು ಕುಟುಕಬಹುದು. ಆದರೆ ಅದಕ್ಕೆ ಪರಿಸರ ಆಯಾಮಗಳೂ ಇರುವುದನ್ನು ನಾವು ಮರೆಯುವಂತಿಲ್ಲ. ಅಷ್ಟರಮಟ್ಟಿಗೆ ಅವರ ಈ ಅಭಿಪ್ರಾಯ ವಿವೇಕಯುತವಾದದ್ದು.

ಹೊಸಮನೆ ವೆಂಕಟೇಶ, ಟಿ. ನರಸೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT