ಮೂವರು ಸಚಿವರ ಕೈಬಿಟ್ಟ ಮಮತಾ

7

ಮೂವರು ಸಚಿವರ ಕೈಬಿಟ್ಟ ಮಮತಾ

Published:
Updated:

ಕೋಲ್ಕತ್ತ : ಪಶ್ಚಿಮ ಬಂಗಾಳ ಸಂಪುಟದಿಂದ ಮೂವರು ಸಚಿವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೈಬಿಟ್ಟಿದ್ದಾರೆ.

ಸಚಿವರನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ಖಚಿತಪಡಿಸಿರುವ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆಯೂ ಆಗಿರುವ ಮಮತಾ, ‘ಈ ಮೂವರು ಪಕ್ಷದ ಸಂಘಟನಾ ಚಟುವಟಿಕೆ ಮೇಲೆ ಗಮನ ಹರಿಸಲು ಅವಕಾಶ ಕೊಡುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ನೀವು ಹೆಚ್ಚು ಚಿಂತಿಸಬೇಕಿಲ್ಲ’ ಎಂದು ಹೇಳಿದ್ದಾರೆ.

ಹಿಂದುಳಿದ ವರ್ಗದ ಕಲ್ಯಾಣ ಸಚಿವ ಚೂರಾಮಣಿ ಮಹತೊ, ಗಿರಿಜನ ಅಭಿವೃದ್ಧಿ ಸಚಿವ ಜೇಮ್ಸ್‌ ಕುಜುರ್‌ ಮತ್ತು ಅಬನಿ ಜೊಯಾರ್ಡರ್ (ಖಾತೆ ರಹಿತ ಸಚಿವ) ತಮ್ಮ ರಾಜೀನಾಮೆ ಪತ್ರಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದಾರೆ ಎಂದು ರಾಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry