ಜೂನ್‌ 24ರಂದು ಹೊಸ ಸಂಘಟನೆ ಸ್ಥಾಪನೆ: ಪ್ರವೀಣ್‌ ತೊಗಾಡಿಯಾ

7

ಜೂನ್‌ 24ರಂದು ಹೊಸ ಸಂಘಟನೆ ಸ್ಥಾಪನೆ: ಪ್ರವೀಣ್‌ ತೊಗಾಡಿಯಾ

Published:
Updated:
ಜೂನ್‌ 24ರಂದು ಹೊಸ ಸಂಘಟನೆ ಸ್ಥಾಪನೆ: ಪ್ರವೀಣ್‌ ತೊಗಾಡಿಯಾ

ಅಹ್ಮದಾಬಾದ್‌ : ವಿಶ್ವ ಹಿಂದೂ ಪರಿಷದ್‌ನ ಮಾಜಿ ಮುಖಂಡ ಪ್ರವೀಣ್‌ ತೊಗಾಡಿಯಾ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಯೊಂದನ್ನು ಆರಂಭಿಸಲಿದ್ದಾರೆ.

‘ಹಿಂದುತ್ವ ಚಳವಳಿಯೇ ಮುಖ್ಯ ಧ್ಯೇಯವಾಗಿರುವ ಸಂಘಟನೆಗೆ ದೆಹಲಿಯಲ್ಲಿ ಜೂ. 24ರಂದು ಚಾಲನೆ ನೀಡಲಿದ್ದು, ಸಂಘಟನೆಯ ಹೆಸರನ್ನು ಅದೇ ದಿನ ಘೋಷಿಸುವುದಾಗಿ’ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡುವಂತೆ ಒತ್ತಾಯಿಸಿ ದೇಶದಾದ್ಯಂತ ರೈತರು ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲಿಸುವೆ. ಜೂ. 8ರಂದು ಮಧ್ಯಪ್ರದೇಶದ ಮಂದಸೌರ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವೆ’ ಎಂದು ಹೇಳಿದರು.

‘ಹಿಂದುತ್ವ ಕಾರ್ಯಸೂಚಿಗೂ ಸದ್ಯ ನಡೆಯುತ್ತಿರುವ ರೈತರ ಹೋರಾಟಕ್ಕೂ ಸಂಬಂಧ ಇದೆ. ಏಕೆಂದರೆ ದೇಶದ ಬಹುತೇಕ ರೈತರು ಹಿಂದೂಗಳೇ ಆಗಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry