ಫ್ಲಿಪ್‌ಕಾರ್ಟ್‌ ಸ್ವಾಧೀನ ಪ್ರಕ್ರಿಯೆ ವರ್ಷಾಂತ್ಯಕ್ಕೆ: ವಾಲ್‌ಮಾರ್ಟ್‌

7

ಫ್ಲಿಪ್‌ಕಾರ್ಟ್‌ ಸ್ವಾಧೀನ ಪ್ರಕ್ರಿಯೆ ವರ್ಷಾಂತ್ಯಕ್ಕೆ: ವಾಲ್‌ಮಾರ್ಟ್‌

Published:
Updated:
ಫ್ಲಿಪ್‌ಕಾರ್ಟ್‌ ಸ್ವಾಧೀನ ಪ್ರಕ್ರಿಯೆ ವರ್ಷಾಂತ್ಯಕ್ಕೆ: ವಾಲ್‌ಮಾರ್ಟ್‌

ಹೈದರಾಬಾದ್‌: ಫ್ಲಿಪ್‌ಕಾರ್ಟ್‌ ಸಂಸ್ಥೆಯಲ್ಲಿನ ಶೇ 77 ರಷ್ಟು ಪಾಲು ಬಂಡವಾಳ ಖರೀದಿಸುವ ಒಪ್ಪಂದವನ್ನು ಈ ವರ್ಷಾಂತ್ಯದಲ್ಲಿಯೇ ಅಂತಿಮಗೊಳಿಸುವ ನಿರೀಕ್ಷೆಯನ್ನು ವಾಲ್‌ಮಾರ್ಟ್‌ ಸಂಸ್ಥೆ ಹೊಂದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಸದ್ಯಕ್ಕೆ ನಡೆಯುತ್ತಿರುವ ಬೆಳವಣಿಗೆಯು ವಾಲ್‌ಮಾರ್ಟ್‌ನ ವರಮಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ 2018ನೇ ಕ್ಯಾಲೆಂಡರ್‌ ವರ್ಷ ಪೂರ್ಣಗೊಳ್ಳುವುದಕ್ಕೂ ಮೊದಲೇ ಒಪ್ಪಂದ ಅಂತಿಮಗೊಳಿಸಲು ನಿರೀಕ್ಷಿಸಿರುವುದಾಗಿ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಕಮಿಷನ್‌ಗೆ (ಎಸ್‌ಇಸಿ) ಹೇಳಿದೆ.

ಫ್ಲಿಪ್‌ಕಾರ್ಟ್‌ ಸಂಸ್ಥೆಯಲ್ಲಿನ ಷೇರು ಖರೀದಿ ಒಪ್ಪಂದವನ್ನು ವಾಲ್‌ಮಾರ್ಟ್‌ ಸಂಸ್ಥೆಯು ಮೇ ತಿಂಗಳಿನಲ್ಲಿ ಘೋಷಿಸಿತ್ತು. ಹೂಡಿಕೆದಾರರ ಸಭೆಯಲ್ಲಿ ಮಾತನಾ

ಡಿದ್ದ ವಾಲ್‌ಮಾರ್ಟ್‌ ಇಂಕ್‌ನ ಅಧ್ಯಕ್ಷ ಡಗ್ಲಸ್‌ ಮ್ಯಾಕ್‌ಮಿಲನ್‌, ‘ಭಾರತದಲ್ಲಿನ ಚಿಲ್ಲರೆ ವಹಿವಾಟಿನ ಸ್ವರೂಪದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.

‘ಚೀನಾ ಮತ್ತು ಭಾರತದಿಂದ ಸಾಕಷ್ಟು ಕಲಿಯುತ್ತಿದ್ದೇವೆ. ಹೆಚ್ಚಿನ ಅವಕಾಶಗಳು ಇರುವ ಸ್ಥಳಗಳಲ್ಲಿ ನಾವು ಇರಲು ಬಯಸುತ್ತೇವೆ. ಈ ಉದ್ದೇಶದಿಂದಲೇ ಫ್ಲಿಪ್‌ಕಾರ್ಟ್‌ ಮೂಲಕ ಭಾರತವನ್ನು ಪ್ರವೇಶಿಸು‌ತ್ತಿದ್ದೇವೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry