ಗುಂಡಿಕ್ಕಿ ಟಿಎಂಸಿ ನಾಯಕನ ಹತ್ಯೆ

7

ಗುಂಡಿಕ್ಕಿ ಟಿಎಂಸಿ ನಾಯಕನ ಹತ್ಯೆ

Published:
Updated:

ಹೌರಾ, ಪಶ್ಚಿಮ ಬಂಗಾಳ : ‘ಅಪರಿಚಿತ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖಂಡರೊಬ್ಬರು ಸಾವನ್ನಪ್ಪಿದ್ದಾರೆ’ ಎಂದು ‍ಪೊಲೀಸರು ತಿಳಿಸಿದ್ದಾರೆ.

‘ಸೋಮವಾರ ರಾತ್ರಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹತುರಿಯಾ ಗ್ರಾಮದಲ್ಲಿ ಮೊಹ್ಸಿನ್ ಖಾನ್‌ ಎಂಬುವರನ್ನು ಗುಂಡಿಕ್ಕಿ ಸಾಯಿಸಲಾಗಿದೆ. ಇವರು ಹೌರಾ ಜಿಲ್ಲೆಯ ಬಗ್‌ನಾನ್‌ ಪ್ರದೇಶದ ಬೂತ್‌ ಮಟ್ಟದ ಕಾರ್ಯದರ್ಶಿಯಾಗಿದ್ದರು. ಖಾನ್‌ ಅವರ ಪತ್ನಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಸ್ಥಳೀಯರು ಹತುರಿಯಾ ಗ್ರಾಮದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 6ನ್ನು ತಡೆದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry