ಹಸಿವಿನಿಂದ ಮಹಿಳೆ ಸಾವು: ತನಿಖೆಗೆ ಆದೇಶ

7

ಹಸಿವಿನಿಂದ ಮಹಿಳೆ ಸಾವು: ತನಿಖೆಗೆ ಆದೇಶ

Published:
Updated:

ರಾಂಚಿ : ಜಾರ್ಖಂಡ್‌ನ ಗಿರಿಡೀಹ ಜಿಲ್ಲೆಯಲ್ಲಿ ಸಾವಿತ್ರಿ (58) ಎಂಬ ಮಹಿಳೆ ಹಸಿವಿನಿಂದ ಮೃತಪಟ್ಟಿರುವ ಘಟನೆ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ. ಆಹಾರ ಧಾನ್ಯಗಳನ್ನು ತೆಗೆದುಕೊಳ್ಳಲು ಅವರ ಬಳಿ ರೇಷನ್ ಕಾರ್ಡ್‌ ಕೂಡಾ ಇರಲಿಲ್ಲ ಎನ್ನಲಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಸಚಿವ ಸೂರ್ಯ ರಾಯ್ ಅವರು ವಿಸ್ತೃತ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಮಂಗರಗಡಿ ಗ್ರಾಮದಲ್ಲಿ ವಾಸವಿದ್ದ ಮಹಿಳೆಯ ಕುಟುಂಬಕ್ಕೆ ಸ್ಥಳೀಯ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರಧಾನ್ಯ ನಿರಾಕರಿಸಲಾಗಿತ್ತು. 2012ರಲ್ಲಿ ಅವರ ರೇಷನ್ ಕಾರ್ಡ್ ರದ್ದುಗೊಂಡಿತ್ತು. ಶನಿವಾರ ಮೃತಪಟ್ಟ ಮಹಿಳೆಯು, ಮೂರು ದಿನಗಳಿಂದ ಊಟ ಮಾಡಿರಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಾವಿತ್ರಿ ಅವರ ಗಂಡ 10 ವರ್ಷ ಹಿಂದೆ ತೀರಿಕೊಂಡಿದ್ದಾರೆ. ಇಬ್ಬರು ಮಕ್ಕಳು ಕೆಲಸ ಅರಸಿ ಬೇರೆ ಕಡೆ ಹೋಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry