ಬೇಸ್ ಬಾಲ್‌ನಲ್ಲಿ ರೋಹಿತ್‌ಗೆ ‘ಫಸ್ಟ್‌ ಪಿಚ್’ ಗೌರವ

7

ಬೇಸ್ ಬಾಲ್‌ನಲ್ಲಿ ರೋಹಿತ್‌ಗೆ ‘ಫಸ್ಟ್‌ ಪಿಚ್’ ಗೌರವ

Published:
Updated:
ಬೇಸ್ ಬಾಲ್‌ನಲ್ಲಿ ರೋಹಿತ್‌ಗೆ ‘ಫಸ್ಟ್‌ ಪಿಚ್’ ಗೌರವ

ಬೆಂಗಳೂರು: ಅಮೆರಿಕದ ಪ್ರತಿಷ್ಠಿತ ಮೇಜರ್ ಲೀಗ್ ಬೇಸ್‌ಬಾಲ್ ಟೂರ್ನಿಯ ಮೊದಲ ಪಂದ್ಯದ ‘ಫಸ್ಟ್‌ ಪಿಚ್’ ಎಸೆತವನ್ನು ಭಾರತ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್‌

ರೋಹಿತ್‌ ಶರ್ಮಾ ಸೋಮವಾರ ಹಾಕಿದರು.

ಟೂರ್ನಿಯ ಮೊದಲ ಎಸೆತಕ್ಕೆ ಫಸ್ಟ್‌ ಪಿಚ್ ಎಂದು ಕರೆಯಲಾಗುತ್ತದೆ. ಸಿಯಾಟಲ್ ಮರಿನರ್ಸ್ ಬೇಸ್‌ಬಾಲ್ ತಂಡ ಮತ್ತು ಥಂಪಾ ಬೇ ರೇಯ್ಸ್‌ ತಂಡಗಳ ನಡುವಣ ಪಂದ್ಯದಲ್ಲಿ ಅವರು ಈ ಗೌರವ ಪಡೆದರು. ತಮ್ಮ ಪತ್ನಿ ರಿತಿಕಾ ಅವರೊಂದಿಗೆ ರೋಹಿತ್ ಅಮೆರಿಕ ಪ್ರವಾಸಕ್ಕೆ ತೆರಳಿದ್ದರು.  ಅವರನ್ನು ಸಿಯಾಟಲ್ ಮರಿನರ್ಸ್‌ ತಂಡವು ಆಹ್ವಾನಿಸಿತ್ತು.

‘ಫಸ್ಟ್‌ ಪಿಚ್ ಎಸೆತ ಹಾಕಿದ್ದು ಖುಷಿ ನೀಡಿದೆ. ಈ ಗೌರವ ನೀಡಿದ ಲೀಗ್ ಮತ್ತು ಸಿಯಾಟಲ್ ತಂಡಕ್ಕೆ ಧನ್ಯವಾದಗಳು’ ಎಂದು ರೋಹಿತ್ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry