ಆಘಾತ ಮರೆಯಲು ಬ್ರೆಜಿಲ್‌ ಸಜ್ಜು

7

ಆಘಾತ ಮರೆಯಲು ಬ್ರೆಜಿಲ್‌ ಸಜ್ಜು

Published:
Updated:
ಆಘಾತ ಮರೆಯಲು ಬ್ರೆಜಿಲ್‌ ಸಜ್ಜು

ರಿಯೊ ಡಿ ಜನೈರೊ: ಕಳೆದ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಜರ್ಮನಿ ಎದುರಿನ ಹೀನಾಯ ಸೋಲನ್ನು ಬ್ರೆಜಿಲ್‌ ತಂಡದ ಆಟಗಾರ ರಾಗಲಿ ಅಥವಾ ಅಭಿಮಾನಿಗಳಾಗಲಿ ಇನ್ನೂ ಮರೆತಿಲ್ಲ.

ಹೌದು. ಫುಟ್‌ಬಾಲ್‌ ಹೇಗೆ ಆಡಬೇಕೆಂದು ಜಗತ್ತಿಗೆ ಹೇಳಿಕೊಟ್ಟ ಕೆಲವೇ ತಂಡಗಳಲ್ಲಿ ಒಂದಾದ ಬ್ರೆಜಿಲ್‌ ಆ ಪಂದ್ಯದಲ್ಲಿ ಆಟವನ್ನೇ ಮರೆತಿದ್ದು ವಿಪರ್ಯಾಸದ ಸಂಗತಿಯಾಗಿತ್ತು.

ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ತಂಡವೊಂದು ಅನುಭವಿಸಿದ ಅತ್ಯಂತ ಕೆಟ್ಟ ಸೋಲು ಅದಾಗಿತ್ತು. ತವರು ನೆಲದಲ್ಲೇ ಬ್ರೆಜಿಲ್‌ ವಿರುದ್ಧ ಜರ್ಮನಿಯು 7–1 ಗೋಲುಗಳಿಂದ ಗೆದ್ದು ಆ ದೇಶದ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿತ್ತು.

ಇಂದಿಗೂ ಆ ಸೋಲು ತಂಡದ ಆಟಗಾರರು ಹಾಗೂ ಅಭಿಮಾನಿಗಳಿಗೆ ದುಃಸ್ವಪ್ನದಂತೆ ಕಾಡುತ್ತದೆ. ಆದರೆ ಸೋಲಿನ ಅವಮಾನದ ನೆನಪುಗಳ ಮೇಲೆ ಮತ್ತೆ ಚಾಂಪಿಯನ್‌ ಪಟ್ಟ ಏರಲು ಬ್ರೆಜಿಲ್‌ ತಂಡ ಈ ಬಾರಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

2016ರಲ್ಲಿ ಕೋಚ್‌ ಆಗಿ ನೇಮಕಗೊಂಡ ಟಿಟೆ ಅವರು ಕಳೆದ ಎರಡು ವರ್ಷಗಳಲ್ಲಿ ತಂಡವನ್ನು ಶಕ್ತಿಯುತಗೊಳಿಸಿದ್ದಾರೆ. ಇದೇ ಕಾರ ಣದಿಂದ ಈ ಬಾರಿಯ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಬ್ರೆಜಿಲ್‌ ಕೂಡ ಒಂದಾಗಿದೆ. ‌ ಹಿಂದಿನ ವಿಶ್ವಕಪ್‌ ತಂಡಕ್ಕೆ ಹೋಲಿಸಿದರೆ ಈಗಿನ ತಂಡದಲ್ಲಿರುವ ರಕ್ಷಣಾ ವಿಭಾಗದ ಆಟಗಾರರು ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾರೆ. ಕೆಸ್ಮಿರೊ, ಮಾರ್ಕ್ವಿನ್‌ಹೋಸ್‌ ಅವರಂತಹ ಪ್ರತಿಭಾಶಾಲಿ ಆಟಗಾರರು ಈ ವಿಭಾಗಕ್ಕೆ ಬಲ ಒದಗಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry