ಜೂ.8ರಿಂದ ‘ಗ್ರಾಮೀಣ ಕುಟುಂಬ ಸಿರಿಧಾನ್ಯ ಉತ್ಸವ’

7

ಜೂ.8ರಿಂದ ‘ಗ್ರಾಮೀಣ ಕುಟುಂಬ ಸಿರಿಧಾನ್ಯ ಉತ್ಸವ’

Published:
Updated:
ಜೂ.8ರಿಂದ ‘ಗ್ರಾಮೀಣ ಕುಟುಂಬ ಸಿರಿಧಾನ್ಯ ಉತ್ಸವ’

ಬೆಂಗಳೂರು: ಸಿರಿಧಾನ್ಯಗಳ ಸಂಸ್ಕೃತಿ ಪ್ರಾಮುಖ್ಯ ಮತ್ತು ಆಹಾರದಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ಅರಿವು ಮೂಡಿಸಲು ‘ಗ್ರಾಮೀಣ ಕುಟುಂಬ ಸಿರಿಧಾನ್ಯ ಉತ್ಸವ’ವನ್ನು

ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣ ಕುಟುಂಬ ಮಂಡಳಿಯ ಸಂಸ್ಥಾಪಕ ಎಂ.ಎಚ್‌.ಶ್ರೀಧರಮೂರ್ತಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿರಿಧಾನ್ಯಗಳ ಪುನರುಜ್ಜೀವನಕ್ಕಾಗಿ ರೈತರ ಜೊತೆ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯವಿರುವ ಕೃಷಿ ಶಿಕ್ಷಣ, ತರಬೇತಿ ನೀಡಲು, ಮಾರುಕಟ್ಟೆ, ಸಂಸ್ಥೆಯ ಚಟುವಟಿಕೆಗಳ ವಿಸ್ತರಣೆಗೆ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದರು.

ಇಂದಿನ ಆಹಾರ ಪದ್ಧತಿ ಕಲುಷಿತಗೊಂಡಿದೆ ಮತ್ತು ಬೇಕರಿ ತಿಂಡಿಗಳ ಸೇವನೆ ಹೆಚ್ಚಾಗಿರುವುದರಿಂದ ಜನತೆ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಜೂ.8ರಿಂದ 10ರವರೆಗೂ ಲಾಲ್‌ಬಾಗ್‌ನ ಮರೀಗೌಡ ಸ್ಮಾರಕ ಭವನದದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ ಎಂದರು.

ಮೊದಲನೇ ದಿನ ರೈತರಿಗೆ ಸಿರಿಧಾನ್ಯ ಬೆಳೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಜೊತೆಗೆ ಬೆಳೆಗಾರರಿಗೆ ಸನ್ಮಾನಿಸಲಾಗುತ್ತದೆ. ಎರಡನೇ ದಿನ ಮಹಿಳೆಯರಿಗೆ ಸಿರಿಧಾನ್ಯ ಅಡುಗೆ ತರಬೇತಿ ಮತ್ತು ಸ್ಪರ್ಧೆ ಏರ್ಪಡಿಸಲಾಗಿದೆ. ಮೂರನೇ ದಿನ ಡಾ.ಖಾದರ್‌ ಅವರ ಜತೆಗೆ ಸಂವಾದ ನಡೆಸಲಾಗುತ್ತದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry