ಇಂಗ್ಲೆಂಡ್‌ ಕ್ರಿಕೆಟ್‌ ತಂಡದಲ್ಲಿ ಜೇಕ್‌ ಬಾಲ್‌ಗೆ ಸ್ಥಾನ

7

ಇಂಗ್ಲೆಂಡ್‌ ಕ್ರಿಕೆಟ್‌ ತಂಡದಲ್ಲಿ ಜೇಕ್‌ ಬಾಲ್‌ಗೆ ಸ್ಥಾನ

Published:
Updated:
ಇಂಗ್ಲೆಂಡ್‌ ಕ್ರಿಕೆಟ್‌ ತಂಡದಲ್ಲಿ ಜೇಕ್‌ ಬಾಲ್‌ಗೆ ಸ್ಥಾನ

ಲಂಡನ್‌: ಆಸ್ಟ್ರೇಲಿಯಾ ವಿರುದ್ಧದ ಐದು ಏಕದಿನ ಪಂದ್ಯಗಳ ಕ್ರಿಕೆಟ್‌ ಸರಣಿಗೆ ಇಂಗ್ಲೆಂಡ್‌ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.

‘ತೊಡೆ ಸ್ನಾಯು ಗಾಯದಿಂದ ಬಳಲುತ್ತಿರುವ ಮಧ್ಯಮ ವೇಗದ ಬೌಲರ್‌ ಕ್ರಿಸ್‌ ವೋಕ್ಸ್‌ ಹಾಗೂ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರು ತಂಡದಲ್ಲಿದ್ದಾರೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಆಡಲು ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ, ನಾಟಿಂಗ್‌ಹ್ಯಾಮ್‌ ಶೈರ್‌ ಕೌಂಟಿ ತಂಡದ ವೇಗದ ಬೌಲರ್‌ ಜೇಕ್‌ ಬಾಲ್‌ ಅವರಿಗೆ ತಂಡದಲ್ಲಿ ಸ್ಥಾನ ದೊರೆತಿದೆ’ ಎಂದು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ಹೇಳಿದೆ.

‘ಗಾಯಗೊಂಡಿರುವ ಇಬ್ಬರು ಆಟಗಾರರು ಚಿಕಿತ್ಸೆ ಪಡೆಯುತ್ತಿದ್ದು ಸರಣಿಯ ಕೊನೆಯ ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದೆ’ ಎಂದು ಅದು ತಿಳಿಸಿದೆ.

ಜೇಕ್‌ ಅವರು ಆಡಿರುವ 17 ಏಕದಿನ ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಗಳಿಸಿದ್ದಾರೆ.  

ಇಂಗ್ಲೆಂಡ್‌ ತಂಡ ಇಂತಿದೆ:  ಇಯಾನ್‌ ಮಾರ್ಗನ್‌ (ನಾಯಕ), ಮೋಯಿನ್‌ ಅಲಿ, ಜೋನಾಥನ್‌ ಬೆಸ್ಟೋ, ಜೇಕ್‌ ಬಾಲ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಜೋಸ್‌ ಬಟ್ಲರ್‌, ಟಾಮ್‌ ಕರನ್‌, ಅಲೆಕ್ಸ್‌ ಹೇಲ್ಸ್‌, ಲಿಯಾಮ್‌ ಪ್ಲಂಕೆಟ್‌, ಅದಿಲ್‌ ರಶೀದ್‌, ಜೊ ರೂಟ್‌, ಜೇಸನ್‌ ರಾಯ್‌, ಬೆನ್‌ ಸ್ಟೋಕ್ಸ್‌, ಡೆವಿಡ್‌ ಮಿಲ್ಲೆ, ಕ್ರಿಸ್‌ ವೋಕ್ಸ್‌, ಮಾರ್ಕ್‌ ವುಡ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry