ಮತ್ತೆ ಹಸಿರಾದ ಬೆಂಗಳೂರು ನಗರ!

7
ಗಲ್ಲಿ ಗಲ್ಲಿಗಳಲ್ಲಿ ಜಾಗೃತಿ ಅಭಿಯಾನ

ಮತ್ತೆ ಹಸಿರಾದ ಬೆಂಗಳೂರು ನಗರ!

Published:
Updated:
ಮತ್ತೆ ಹಸಿರಾದ ಬೆಂಗಳೂರು ನಗರ!

ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ನಗರದ ವಿವಿಧೆಡೆ ಮಂಗಳವಾರ ಸಸಿ ನೆಡುವ, ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳು ನಡೆದವು.

ವಿವಿಧ ಸಂಘಟನೆಗಳು, ಉದ್ಯಮ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಬೈಸಿಕಲ್‌ ಜಾಥಾ, ಪ್ಲಾಸ್ಟಿಕ್‌ ಹೆಕ್ಕುವ ಕಾರ್ಯಕ್ರಮ, ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿದ್ದವು. ಕೆಲವು ಕಾರ್ಯಕ್ರಮಗಳ ನೋಟ ಹೀಗಿದೆ.

ಕೃಷಿ ವಿಶ್ವವಿದ್ಯಾಲಯ: ವಿ.ವಿಯ ಕೃಷಿ ಡೀನ್‌ ಡಾ.ರಾಜೇಂದ್ರ ಪ್ರಸಾದ್‌ ಮಾತನಾಡಿ, ‘ಸಂಪೂರ್ಣವಾಗಿ ಪ್ಲಾಸ್ಟಿಕ್‌ ನಿಷೇಧಿಸುವ ಮೂಲಕ ಪರಿಸರಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು. ವಿವಿ ಆವರಣದಲ್ಲಿ ಓಡಾಡಲು ಬೈಸಿಕಲ್‌ ಒದಗಿಸುವ ಕುರಿತು ಚಿಂತನೆ ನಡೆದಿದೆ’ ಎಂದು ಹೇಳಿದರು. 

ಮಾಲಿನ್ಯ ನಿಯಂತ್ರಣಾ ಮಂಡಳಿಯ ಮಾಜಿ ಅಧ್ಯಕ್ಷ ಡಾ.ಎ.ಎಸ್. ಸದಾಶಿವಯ್ಯ ಮಾತನಾಡಿ, ‘ಕೆನಡಾದಂತಹ ಮುಂದುವರಿದ ರಾಷ್ಟ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ 4,500 ಮರಗಳನ್ನು ಬೆಳೆಸಿದ್ದಾರೆ. ಚೀನಾದಲ್ಲಿ ಪ್ರತಿ ವ್ಯಕ್ತಿಗೆ 127 ಮರಗಳಿವೆ. ನಮ್ಮಲ್ಲಿ ಕೇವಲ 27 ಇವೆ. ಇದು ಆತಂಕಕಾರಿ ಎಂದರು. ಕುಲಸಚಿವ ಡಾ.ಎಂ.ಬಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಬಸವನಗುಡಿ ಗಿರಿನಗರ ಹಿರಿಯ ನಾಗರಿಕರ ವೇದಿಕೆ: ಇದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿ.ಎಸ್‌.ಮೋಹನ್‌, ಅನಿರುದ್ಧ, ಪ್ರಮೋದ್‌, ಎನ್‌.ಎ.ನರೇಂದ್ರ, ಸತೀಶ್‌, ಚಂದ್ರು, ಕಾರ್ತಿಕ್‌ ಇದ್ದರು.

ವೇದಾಂತ ಸಂಸ್ಥೆ: ವೇದಾಂತ – ಸೆಸಾ ಗೋವಾ ಐರನ್‌ ಓರ್‌ ವತಿಯಿಂದ ಚಿತ್ರದುರ್ಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಗಿದೆ.  ಸಸಿ ನೆಡುವುದು, ಸ್ವಚ್ಛತಾ ಅಭಿಯಾನ, ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಹಿರಿಗುಂಟುನೂರು, ಬೊಮ್ಮೇನಹಳ್ಳಿ, ಕಡ್ಲೇಗುಡ್ಡ, ಮೇಗಲಹಳ್ಳಿ ಮತ್ತು ಚಿಕ್ಕೇನಹಳ್ಳಿಯ ಪ್ರೌಢಶಾಲೆಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳು ನಡೆದವು.

ಕಂಪನಿಯ ಕರ್ನಾಟಕ ಘಟಕದ ಮುಖ್ಯಸ್ಥ ಕೃಷ್ಣಾರೆಡ್ಡಿ ಅವರು ಮಾತನಾಡಿ, ‘ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ ವಿಶ್ವದಾದ್ಯಂತ ಪ್ರತಿ ವರ್ಷ 500 ಬಿಲಿಯನ್ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಬಳಕೆ ಮಾಡಲಾಗುತ್ತಿದೆ. ಇವು ಪ್ಲಾಸ್ಟಿಕ್ ತ್ಯಾಜ್ಯಗಳಾಗಿ ಮಾರ್ಪಾಡಾಗುತ್ತಿವೆ. ಭಾರತ ಒಂದರಲ್ಲೇ ಪ್ರತಿದಿನ 15,342 ಟನ್‍ನಷ್ಟು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿರುವುದು ಕಳವಳಕಾರಿ. ಪ್ಲಾಸ್ಟಿಕ್‍ನಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ತಪ್ಪಿಸಲು ಇದು ಸಕಾಲವಾಗಿದೆ’ ಎಂದರು.ವಿಭೂತಿಪುರ ವೀರಸಿಂಹಾಸನ ಮಠದ ಶಾಲೆಯಲ್ಲಿ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ವಿದ್ಯಾರ್ಥಿಗಳೊಂದಿಗೆ ಸಸಿ ನೆಟ್ಟರು

ಆರ್‌ಬಿಎಎನ್ಎಂಎಸ್ ಶಿಕ್ಷಣ ಸಂಸ್ಥೆ: ಆರ್‌ಬಿಎಎನ್ಎಂಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ವಾಕಥಾನ್‌ ನಡೆಯಿತು. ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶಶಿಂಧರ್‌ ನಾರಾಯಣ್‌, ಪ್ರಾಂಶುಪಾಲ ಡಾ.ಜಯಪ್ಪ, ಆಡಳಿತಾಧಿಕಾರಿ ಡಾ.ವೀರಭದ್ರಪ್ಪ, ಗೀತಾ ಹರಿಕೃಷ್ಣ ಇದ್ದರು.

ಕೆಎಸ್‌ಆರ್‌ಟಿಸಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ವಿಭಾಗದ 2ನೇ ಘಟಕದ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಸಾಲುಮರದ ತಿಮ್ಮಕ್ಕ, ನಿಗಮದ ನಿರ್ದೇಶಕ ಶ್ರೀನಿವಾಸ್‌, ಮುಖ್ಯಯಾಂತ್ರಿಕ ಎಂಜಿನಿಯರ್‌ ಡಾ.ಕೆ.ರಾಮಮೂರ್ತಿ,ಕಾನೂನು ಅಧಿಕಾರಿ ಎಸ್. ಮನೋಹರ್, ಪ್ರಧಾನ ವ್ಯವಸ್ಥಾಪಕ ಬಿ.ಸಿ. ರೇಣುಕೇಶ್ವರ್, ಉಗ್ರಾಣ ಮತ್ತು ನಿಯಂತ್ರಣಾಧಿಕಾರಿ ಎಂ.ಸುರೇಶ್ ಬಾಬು ಇದ್ದರು.

ಹವಾರ್ಡ್‌ ಜಾನ್ಸನ್‌ ಹೋಟೆಲ್‌: ಹವಾರ್ಡ್ ಜಾನ್‌ಸನ್ ಹೋಟೆಲ್ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಹೋಟೆಲ್ ಸಿಬ್ಬಂದಿ ನಾಗವಾರ(ಮಾನ್ಯತಾ ಟೆಕ್ ಪಾರ್ಕ್) ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಹೋಟೆಲ್ ಆವರಣದವರೆಗೂ ರಸ್ತೆಯ ಎರಡು ಬದಿಗಳನ್ನು ಸ್ವಚ್ಛಗೊಳಿಸಿದರು.

ಈ ವೇಳೆ ಮಾತನಾಡಿದ ಹೋಟೆಲ್‌ನ ಜನರಲ್ ಮ್ಯಾನೇಜರ್ ರಿಷಿ ನಿಯೋ ಅವರು ‘ಹವಾರ್ಡ್ ಜಾನ್‌ಸನ್ ಹೋಟೆಲ್ ಕಳೆದ ಕೆಲವು ತಿಂಗಳುಗಳಲ್ಲಿ ಪ್ಲಾಸ್ಟಿಕ್‌ ಮುಕ್ತಗೊಳಿಸಲು ಮುಂಜಾಗೃತಾ ಕ್ರಮ ಕೈಗೊಂಡಿದೆ. ಹೋಟೆಲ್‌ನಲ್ಲಿ ಪೂರೈಸುವ ಎಲ್ಲ ವಸ್ತುಗಳು ಪ್ಲಾಸ್ಟಿಕ್‌ ಮುಕ್ತವಾಗಿಯೇ ಇವೆ ಎಂದರು.

ಬಿಬಿಎಂಪಿ ಆರೋಗ್ಯ ನಿರೀಕ್ಷಕ ಪ್ರೇಮ್ ಕುಮಾರ್ ಮತ್ತು ಅವರ ತಂಡ, ಬಾಣಸವಾಡಿ ಸಂಚಾರಿ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಸ್.ಐ. ಗುರುರಾಜ್ ಮತ್ತು ಸಿಬ್ಬಂದಿ ಇದ್ದರು.

*

ಸುವಿಧಾಕ್ಕೆ ಚಾಲನೆ

ಔಷಧ ಇಲಾಖೆ, ಬ್ಯೂರೋ ಆಫ್‌ ಇಂಡಿಯನ್‌ ಫಾರ್ಮಾ ಆಶ್ರಯದಲ್ಲಿ ಜನೌಷಧಿ ಸುವಿಧಾ ಹೆಸರಿನ ಜೈವಿಕವಾಗಿ ಕರಗಬಲ್ಲ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್‌ ಅವರು ಮಂಗಳವಾರ ನಗರದಲ್ಲಿ ಬಿಡುಗಡೆಗೊಳಿಸಿದರು. ಈ ನ್ಯಾಪ್‌ಕಿನ್‌ನ್ನು ₹ 2.50ರ ದರದಲ್ಲಿ ವಿತರಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry